ರಾಯ್‌ಪುರ್: ಗುರುವಾರ ನಡೆದ ಛತ್ತೀಸ್‌ಗಢದ ಎರಡನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಒಟ್ಟಾರೆ ಶೇ.68ರಷ್ಟು ಮತದಾನವಾಗಿದೆ.
ಛತ್ತೀಸ್‌ಗಢದ ಎರಡನೇ ಹಾಗೂ ಅಂತಿಮ ಹಣಾಹಣಿಯಲ್ಲಿ 51 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆದಿತ್ತು.
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಅಜಿತ್ ಜೋಗಿ ಮೇಲೆ ಹಲ್ಲೆ ಪ್ರಕರಣ ಬಿಟ್ಟರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿತ್ತು.
51 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 88 ಲಕ್ಷ ಮತದಾರರು ಮತಚಲಾಯಿಸಿದ್ದರು. ರಾಯ್‌ಪುರ ಜಿಲ್ಲೆಯಲ್ಲಿ ಶೇ.60ರಷ್ಟು ಮತದಾನವಾಗಿದ್ದರೆ, ರಾಯ್‌ಗಢ, ಕೋಬ್ರಾ ಮತ್ತು ಜಶ್ಪುರದಲ್ಲಿ ಶೇ.65ರಷ್ಟು ಮತದಾನವಾಗಿತ್ತು. ಬಿಲಾಸ್ಪುರದಲ್ಲಿ ಶೇ.62, ಸರ್ಗುಜದಲ್ಲಿ ಶೇ.60, ಕೊರಿಯದಲ್ಲಿ ಶೇ.55 ಮತ್ತು ಜಂಜಿಗಿರ್ ಮತ್ತು ಚಾಪದಲ್ಲಿ ಶೇ.56ರಷ್ಟು ಮತದಾನವಾಗಿತ್ತು.
ಚುನಾವಣಾ ಆಖಾಡದಲ್ಲಿ 50 ಮಹಿಳೆಯರು ಸೇರಿದಂತೆ 687ಅಭ್ಯರ್ಥಿಗಳಿದ್ದರು. ಡಿಸೆಂಬರ್ 8ರಂದು ಮತಎಣಿಕೆ ನಡೆಯಲಿದೆ. |