ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ದೆಹಲಿ, ಛತ್ತೀಸ್, ಎಂಪಿಯಲ್ಲಿ ಬಿಜೆಪಿ ಮುನ್ನಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ, ಛತ್ತೀಸ್, ಎಂಪಿಯಲ್ಲಿ ಬಿಜೆಪಿ ಮುನ್ನಡೆ
ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆಯಲಿದ್ದರೆ, ದೆಹಲಿ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕೇಸರಿ ಪಕ್ಷವು ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

ದಿ ವೀಕ್ ನಡೆಸಿರುವ ಸಮೀಕ್ಷೆಯಲ್ಲಿ, ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ 94ರಿಂದ 106ರಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾನೆ. ರಾಜಸ್ಥಾನ ವಿಧಾನ ಸಭೆಯು 200 ಸದಸ್ಯಬಲವನ್ನು ಹೊಂದಿದೆ. ಪ್ರಸ್ತುತ ಬಿಜೆಪಿ ಇಲ್ಲಿ 120 ಸ್ಥಾನಗಳನ್ನು ಹೊಂದಿದೆ.

228 ಸ್ಥಾನದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಗೆ 118ರಿಂದ 128 ಸ್ಥಾನಗಳು ಲಭ್ಯವಾಗಬಹುದು ಎಂಬುದಾಗಿ ಸಮೀಕ್ಷೆ ಹೇಳಿದರೆ, ಕಾಂಗ್ರೆಸ್ 100ರಿಂದ 110 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ. ಪ್ರಸ್ತುತ ಬಿಜೆಪಿಯು 171 ಸದಸ್ಯ ಬಲವನ್ನು ಹೊಂದಿದೆ.

ದೆಹಲಿಯಲ್ಲಿ ಬಿಜೆಪಿಯು 36ರಿಂದ 42ರಷ್ಟು ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆಯಬಹುದು ಎಂಬುದು ಸಮೀಕ್ಷಾ ಅಭಿಪ್ರಾಯ. ಆಡಳಿತಾರೂಢ ಕಾಂಗ್ರೆಸ್ 28ರಿಂದ 34 ಸ್ಥಾನಗಳನ್ನು ಗಳಿಸಬಹುದು. ದೆಹಲಿ ವಿಧಾಸಭಾ ಸದಸ್ಯ ಬಲ 70 ಸ್ಥಾನಗಳು.

ಸಮೀಕ್ಷಾ ಪ್ರಕಾರ ಛತ್ತೀಸ್‌ಗಢದಲ್ಲೂ ಕೇಸರಿ ಪಾಳಯ ಮುನ್ನಡೆಯಲ್ಲಿದೆ. ಬಿಜೆಪಿ 44ರಿಂದ 52 ಸ್ಥಾನಗಳನ್ನು ಗೆಲ್ಲುವ ಊಹೆಗಳಿದ್ದರೆ, ಕಾಂಗ್ರೆಸ್ 38ರಿಂದ 46 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಲಾಗಿದೆ. ಪ್ರಸ್ತುತ 90 ಸ್ಥಾನಗಳ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಬಿಜೆಪಿ 50 ಸ್ಥಾನಗಳನ್ನು ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಛತ್ತೀಸ್‌ಗಢ: ದ್ವಿತೀಯ ಹಂತದಲ್ಲಿ ಶೇ.68 ಮತದಾನ
ಮಿಲಿಯಾಧಿಪತಿಗಳು, ಕ್ರಿಮಿನಲ್‌ಗಳು ಛತ್ತೀಸ್‌ಗಢ ಕಣದಲ್ಲಿ
ಛತ್ತೀಸ್‌ಗಢ: ಶೇ.37ರಷ್ಟು ಮತದಾನ
ಛತ್ತೀಸ್‌ಗಢ: ಅಜಿತ್ ಜೋಗಿ ಮೇಲೆ ಹಲ್ಲೆ
ಕಾಶ್ಮೀರದಲ್ಲಿ ಮರುಮತದಾನ ಆರಂಭ
ಮಿನಿ ಮಹಾಚುನಾವಣೆಯ ಆಖಾಡ ಸಿದ್ಧತೆ