ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > 'ಮದರ್ ಥೆರೆಸಾ'-ಚೋಟೇ ಭಯ್ಯಾ ನಡುವೆ ಹಣಾಹಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಮದರ್ ಥೆರೆಸಾ'-ಚೋಟೇ ಭಯ್ಯಾ ನಡುವೆ ಹಣಾಹಣಿ
ಸವಾಯ್‌ಮಾಧೋಪುರ: ಸುಮಾರು ಹತ್ತು ವರ್ಷಗಳ ಹಿಂದೆ ಅವರಿಬ್ಬರು ಬಹಳ ಅನ್ಯೋನ್ಯರಾಗಿದ್ದವರು. ಆ ಒಂದು ಮಟಮಟ ಮಧ್ಯಾಹ್ನ ಬಿಜೆಪಿಯ ಬಂಡುಕೋರ ಅಭ್ಯರ್ಥಿ ಕಿರೋರಿ ಲಾಲ್ ಮೀನಾ ಅವರು ಜಸ್‌ಕೌರ್ ಮೀನಾ ಅವರನ್ನು ಸವಾಯ್ ಮಾಧೋಪುರದ ಮೀನಾಗಳ 'ಮದರ್ ಥೆರೇಸಾ' ಎಂದು ಕರೆದರು. ಆಗ ಸರ್ಕಾರಿ ಅಧಿಕಾರಿಯಾಗಿದ್ದ ಕೌರ್ ಕಿರೋರಿಯನ್ನು ಅವರು 'ಚೋಟೆ ಭಯ್ಯಾ' ಅಂದಿದ್ದರು.

ಇಂತಿಪ್ಪ ಈ 'ತಾಯಿ' ಮತ್ತು 'ತಮ್ಮ' ಪ್ರಸ್ತುತ ಚುನಾವಣೆಯ ಕಣದಲ್ಲಿ ಬದ್ಧ ವೈರಿಗಳು! ಯಾವ ಕ್ಷೇತ್ರದಲ್ಲಿ ಜಸ್‌ಕೌರ್ ಅವರನ್ನು ಕಿರೋರಿ ಬುಡಕಟ್ಟು ಜನಾಂಗದ ಪ್ರವಾದಿ ಎಂದು ಕರೆದಿದ್ದರೋ, ಅದೇ ಕ್ಷೇತ್ರದಲ್ಲಿ ಕಿರೋರಿಯನ್ನು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಎದುರಿಸಲಿದ್ದಾರೆ. ಇಲ್ಲಿ ಕಿರೋರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿದ್ದಾರೆ. ಇದನ್ನು ಸ್ಥಳೀಯರು ಬಿಜೆಪಿ ವಿರುದ್ಧ ಬಿಜೆಪಿ ಸ್ಫರ್ಧೆ ಎನ್ನುತ್ತಿದ್ದಾರೆ.

ಇತರ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೆ, ಕೌರ್ ಮಾತ್ರ ಡ್ಯಾಮೇಜ್ ಕಂಟ್ರೋಲ್‌ಗೆ ಹೆಣಗುತ್ತಿದ್ದಾರೆ. ಕಿರೋರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಲೇ, ಅವರ ಅಭಿಮಾನಿಗಳೆಲ್ಲ ಪಕ್ಷದ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಮಾಜಿ ಅಧ್ಯಕ್ಷ, ಕಾರ್ಯದರ್ಶಿಯವರೂ ತಮ್ಮತಮ್ಮ ಸ್ಥಾನಗಳಿಗೆ ರಾಜೀನಾಮೆ ಎಸೆದು ಕಿರೋರಿ ಹಿಂದೆ ತೆರಳಿದ್ದಾರೆ. ರಣತಂಬೂರ್ ರಸ್ತೆಯಲ್ಲಿರುವ ತನ್ನ ಮನೆಯಲ್ಲಿ ಕೌರ್, ಹೊಸ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಇನ್ನೂ ಪಕ್ಷದಲ್ಲಿರುವ ಕಾರ್ಯಕರ್ತರನ್ನು ಭೇಟಿಯಾಗಲು ಆದೇಶ ನೀಡುವಲ್ಲಿ ನಿರತರಾಗಿದ್ದಾರೆ.

ಇವರೆಲ್ಲ ರಾಜೀನಾಮೆ ನೀಡುತ್ತಾರೆ ಎಂಬುದು ನಿರೀಕ್ಷಿತ, ಯಾಕೆಂದರೆ ಇಡೀ ತಂಡವನ್ನು ಕಿರೋರಿ ನೇಮಿಸಿದ್ದರು ಎಂದು ಕೌರ್ ಹೇಳುತ್ತಾರೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆಯಾಗಿದ್ದ ಕೌರ್, ಇದೇ ಪ್ರಥಮ ಬಾರಿಗೆ ರಾಜಸ್ಥಾನ ವಿಧಾನಸಭೆಗೆ ಸ್ಫರ್ಧಿಸುತ್ತಿದ್ದು, ಕಿರೋರಿ ಸವಾಲನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ತಾಯಿಯೋ, ತಮ್ಮನೋ? ಮತದಾರರೇ ನಿರ್ಧರಿಸಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿ, ಛತ್ತೀಸ್, ಎಂಪಿಯಲ್ಲಿ ಬಿಜೆಪಿ ಮುನ್ನಡೆ
ಛತ್ತೀಸ್‌ಗಢ: ದ್ವಿತೀಯ ಹಂತದಲ್ಲಿ ಶೇ.68 ಮತದಾನ
ಮಿಲಿಯಾಧಿಪತಿಗಳು, ಕ್ರಿಮಿನಲ್‌ಗಳು ಛತ್ತೀಸ್‌ಗಢ ಕಣದಲ್ಲಿ
ಛತ್ತೀಸ್‌ಗಢ: ಶೇ.37ರಷ್ಟು ಮತದಾನ
ಛತ್ತೀಸ್‌ಗಢ: ಅಜಿತ್ ಜೋಗಿ ಮೇಲೆ ಹಲ್ಲೆ
ಕಾಶ್ಮೀರದಲ್ಲಿ ಮರುಮತದಾನ ಆರಂಭ