ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಛತ್ತೀಸ್‌ಗಢ: 478 ಮತದಾರರು 510 ಮತಗಳು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಛತ್ತೀಸ್‌ಗಢ: 478 ಮತದಾರರು 510 ಮತಗಳು!
ಎರಡನೇ ಹಂತದ ಮತದಾನದ ವೇಳೆ ನೊಂದಾಯಿತ 478 ಮತದಾರರು 520 ಮತ ಚಲಾವಣೆ ಮಾಡಿರುವ 'ಮ್ಯಾಜಿಕ್' ನಾಲ್ವರು ಚುನಾವಣಾ ಅಧಿಕಾರಿಗಳ ಅಮಾನತ್ತಿಗೆ ಕಾರಣವಾಗಿದೆ.

ರಾಯ್‌ಪುರ ಜಿಲ್ಲೆಯ ಮತಗಟ್ಟೆಯೊಂದರಲ್ಲಿ 478 ಮತದಾರರ ಹೆಸರು ನೋಂದಣಿಯಾಗಿದ್ದರೆ, 510 ಮತಗಳು ಚಲಾವಣೆಯಾಗಿದ್ದವು. ಈ ಹಿನ್ನೆಲೆಯಲ್ಲಿ ನಾಲ್ವರು ಚುನಾವಣಾ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಅಭನ್‌ಪುರ ಕ್ಷೇತ್ರದ ಮಾಣಿಕ್‌ಚೌರಿ ಗ್ರಾಮದ 176ನೆ ಮತಗಟ್ಟೆಯಲ್ಲಿ ಶೇ.100 ಕ್ಕಿಂತಲೂ ಅಧಿಕ ಮತದಾನವಾಗಿತ್ತು. ನವೆಂಬರ್ 20ರಂದು ಛತ್ತೀಸ್‌ಗಢದ 51 ಕ್ಷೇತ್ರಗಳಿಗೆ ಎರಡನೆ ಮತ್ತು ಅಂತಿಮ ಸುತ್ತಿನ ಮತದಾನ ನಡೆದಿದ್ದ ವೇಳೆ ಈ ಆವಾಂತರ ಸಂಭವಿಸಿದೆ. ಇಲ್ಲಿ ನಿಯೋಜಿತರಾಗಿದ್ದ ನಾಲ್ಕೂ ಮಂದಿ ಅಧಿಕಾರಿಳನ್ನು ಅಮಾನತ್ತು ಮಾಡಲಾಗಿದ್ದು, ಮರುಮತದಾನಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಇದು ಮಾಜಿ ಲೋಕಸಭಾ ಸದಸ್ಯ ಚಂದ್ರಶೇಖರ್ ಸಾಹು ಅವರ ಪೂರ್ವಜರ ಹಳ್ಳಿಯಾಗಿದೆ. ಸಾಹು ಹಾಗೂ ಛತ್ತೀಸ್‌ಗಢ ಕಾಂಗ್ರೆಸ್ ಅಧ್ಯಕ್ಷ ಧಾನೇಂದ್ರ ಸಾಹು ನಡುವೆ ಕಣದಲ್ಲಿ ಕದನವೇರ್ಪಟ್ಟಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಮದರ್ ಥೆರೆಸಾ'-ಚೋಟೇ ಭಯ್ಯಾ ನಡುವೆ ಹಣಾಹಣಿ
ದೆಹಲಿ, ಛತ್ತೀಸ್, ಎಂಪಿಯಲ್ಲಿ ಬಿಜೆಪಿ ಮುನ್ನಡೆ
ಛತ್ತೀಸ್‌ಗಢ: ದ್ವಿತೀಯ ಹಂತದಲ್ಲಿ ಶೇ.68 ಮತದಾನ
ಮಿಲಿಯಾಧಿಪತಿಗಳು, ಕ್ರಿಮಿನಲ್‌ಗಳು ಛತ್ತೀಸ್‌ಗಢ ಕಣದಲ್ಲಿ
ಛತ್ತೀಸ್‌ಗಢ: ಶೇ.37ರಷ್ಟು ಮತದಾನ
ಛತ್ತೀಸ್‌ಗಢ: ಅಜಿತ್ ಜೋಗಿ ಮೇಲೆ ಹಲ್ಲೆ