ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಜಮ್ಮು ಕಾಶ್ಮೀರ: ಎರಡನೇ ಹಂತದ ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು ಕಾಶ್ಮೀರ: ಎರಡನೇ ಹಂತದ ಮತದಾನ ಆರಂಭ
ಜಮ್ಮು ಕಾಶ್ಮೀರ ರಾಜ್ಯ ವಿಧಾನಸಭೆ ಚುನಾವಣೆಯ ಎರಡನೇ ಹಂತವಾಗಿ ಕಾಶ್ಮೀರದ ಗಂದೇರ್ಬಲ್ ಮತ್ತು ಕಂಗನ್ ಕ್ಷೇತ್ರ ಹಾಗೂ ಜಮ್ಮುವಿನ ನಾಲ್ಕು ಕ್ಷೇತ್ರಗಳಲ್ಲಿ ಬಿಗಿ ಭದ್ರತೆಯಡಿ ಮತದಾನ ಪ್ರಾರಂಭವಾಗಿದೆ.

ಬೆಳಗ್ಗೆ 8 ಗಂಟೆಗೆ ಮತಚಲಾವಣೆ ಪ್ರಾರಂಭವಾಗಿದ್ದು, ಶೀತದ ವಾತಾವರಣದ ಹಿನ್ನೆಲೆಯಲ್ಲಿ ಮತಗಟ್ಟೆಗಳ ಹೊರಗೆ ಮತದಾರರ ಸಂಖ್ಯೆ ಅಲ್ಪವಾಗಿ ಕಂಡುಬಂತು. ಚುನಾವಣಾ ಅಧಿಕಾರಿಗಳ ಪ್ರಕಾರ ಮಧ್ಯಾಹ್ನದ ವೇಳೆಗೆ ಕಾಶ್ಮೀರದ ಗಂದೇರ್ಬಲ್ ಮತ್ತು ಕಂಗನ್‌ನಲ್ಲಿ ಮತದಾನ ಪ್ರಕ್ರಿಯೆ ಚುರುಕು ಗೊಳ್ಳುವುದು ಎಂದು ತಿಳಿಸಿದ್ದಾರೆ.

ಇದಕ್ಕೆ ತದ್ವಿರುದ್ದವಾಗಿ ಜಮ್ಮುವಿನ ಎಲ್ಲಾ ನಾಲ್ಕು ಕ್ಷೇತ್ರಗಳಾದ ನೌಶೇರ, ರಜೌರಿ, ದರ್ಹಾಲ್ ಮತ್ತು ಕಲಕೋಟ್‌ನ ಮತಗಟ್ಟೆಗಳಲ್ಲಿ ಮತದಾರು ಸರದಿಯಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ.

ಕಣಿವೆಯಲ್ಲಿನ ಎರಡು ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ 137,560 ಮತ್ತು ಕಣದಲ್ಲಿ 22 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

ಗಂದೇರ್ಬಲ್ ಕ್ಷೇತ್ರದಲ್ಲಿ ಪ್ರಮುಖವಾಗಿ ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಹಾ, ಪಿಡಿಪಿಯ ಕ್ವಾಜಿ ಮುಹಮ್ಮದ್ ಅಪ್ಜಲ್ ಮತ್ತು ಕಾಂಗ್ರೆಸ್‌ನ ಶೇಖ್ ಮುಹಮ್ಮದ್ ಅಶ್ಪಕ್ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಕಂಗನ್ ಕ್ಷೇತ್ರದಲ್ಲಿ ಹಿರಿಯ ಗುಜ್ಜಾರ್ ನಾಯಕ ಮತ್ತು ಮಾಜಿ ಎನ್‌ಸಿ ಸಚಿವ ಮಿಯಾನ್ ಅಲ್ತಾಪ್ ಅಹ್ಮದ್ ಸೇರಿಂದಂತೆ ಒಟ್ಟು 9 ಇತರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ರಜೌರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 353,457 ಮತದಾರರು ತಮ್ಮ ಮತಚಲಾಯಿಸಲಿದ್ದಾರೆ.

ಒಟ್ಟು 454 ಮತಗಟ್ಟೆಗಳನ್ನು ರಚಿಸಲಾಗಿದ್ದು, ಇದರಲ್ಲಿ 96 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತ್ತು 181ನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಪೂಂಚ್ ಉಪಆಯುಕ್ತ ರಫಿಕ್ ಖಾನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಛತ್ತೀಸ್‌ಗಢ: 478 ಮತದಾರರು 510 ಮತಗಳು!
'ಮದರ್ ಥೆರೆಸಾ'-ಚೋಟೇ ಭಯ್ಯಾ ನಡುವೆ ಹಣಾಹಣಿ
ದೆಹಲಿ, ಛತ್ತೀಸ್, ಎಂಪಿಯಲ್ಲಿ ಬಿಜೆಪಿ ಮುನ್ನಡೆ
ಛತ್ತೀಸ್‌ಗಢ: ದ್ವಿತೀಯ ಹಂತದಲ್ಲಿ ಶೇ.68 ಮತದಾನ
ಮಿಲಿಯಾಧಿಪತಿಗಳು, ಕ್ರಿಮಿನಲ್‌ಗಳು ಛತ್ತೀಸ್‌ಗಢ ಕಣದಲ್ಲಿ
ಛತ್ತೀಸ್‌ಗಢ: ಶೇ.37ರಷ್ಟು ಮತದಾನ