ಜಮ್ಮು ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬೆಂಗಾವಲು ಪಡೆಗಳ ಮೇಲೆ ಕೆಲ ಉದ್ರಿಕ್ತ ಗುಂಪುಗಳು ದಾಳಿ ನಡೆಸಿದಾಗ ಮೂವರು ಭದ್ರತಾ ಪಡೆಗಳ ಸದಸ್ಯರು ಗಾಯಗೊಂಡಿದ್ದು ಮೂರು ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾರಾಮುಲ್ಲಾ ಪಟ್ಟಣದಲ್ಲಿ ಹಿಂದಿನ ದಿನ ಭದ್ರತಾ ಪಡೆಗಳ ಗೋಲಿಬಾರ್‌ನಲ್ಲಿ ಇಬ್ಬರು ಯುವಕರು ಹತ್ಯೆಯಾದ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪುಗಳು ಕುಪ್ವಾರಾ ಜಿಲ್ಲೆಯಲ್ಲಿ ಇಂದು ಮೆಹಬೂಬಾ ಮುಫ್ತಿ ಚುನಾವಣಾ ಪ್ರಚಾರವನ್ನು ಅಂತ್ಯಗೊಳಿಸಿ ಬಾರಾಮುಲ್ಲಾ ಮಾರ್ಗವಾಗಿ ಮರಳುತ್ತಿರುವ ಸಂದರ್ಭದಲ್ಲಿ ವಾಹನಗಳನ್ನು ತಡೆದು ಬೆಂಕಿ ಹಚ್ಚಿದ್ದಲ್ಲದೇ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಘಟನೆಯಲ್ಲಿ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅಂಗರಕ್ಷಕರ ಸಹಾಯದಿಂದ ಪಾರಾಗಿದ್ದು, ಘಟನೆಯಲ್ಲಿ ಮೂವರು ಭದ್ರತಾ ಪಡೆಗಳ ಸದಸ್ಯರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. |