ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಪ್ರತ್ಯೇಕತಾವಾದಿಗಳನ್ನು ತಿರಸ್ಕರಿಸಿದ ಮತದಾರ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತ್ಯೇಕತಾವಾದಿಗಳನ್ನು ತಿರಸ್ಕರಿಸಿದ ಮತದಾರ?
ಜಮ್ಮು-ಕಾಶ್ಮೀರದಲ್ಲಿನ ಎರಡು ಹಂತದ ಮತದಾನಗಳಲ್ಲೂ ಗರಿಷ್ಠ ಪ್ರಮಾಣದಲ್ಲಿ ಮತ ಚಲಾವಣೆಯಾಗಿದ್ದು, ಮತದಾನ ಬಹಿಷ್ಕರಿಸಲು ಕರೆ ಕೊಟ್ಟಿದ್ದ ಇಲ್ಲಿನ ಪ್ರತ್ಯೇಕತಾವಾದಿ ನಾಯಕತ್ವವನ್ನು ಜನ ತಿರಸ್ಕರಿಸಿದ್ದಾರೆಯೇ?

ಮೊದಲೆರಡು ಹಂತಗಳ ಚುನಾವಣೆಯಲ್ಲಿ ನಡೆದಂತೆ ಮುಂದಿನ ಹಂತಗಳಲ್ಲೂ ಮುಂದುವರಿದರೆ ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳ ಆಟ ಕೊನೆಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ಮತದಾನದ ಬಗ್ಗೆ ಎಲ್ಲವನ್ನೂ ಈಗಲೇ ಹೇಳುವುದು ಅಸಾಧ್ಯವಾಗಬಹುದು. ಯಾಕೆಂದರೆ ಚುನಾವಣೆ ಡಿಸೆಂಬರ್ 24ರವರೆಗೂ ನಡೆಯಲಿದೆ. ಸುಮಾರು ಆರು ದಶಕಗಳಿಂದ ಇದುವರೆಗೆ ಸ್ವಾತಂತ್ರ್ಯದ ಮೇಲೆ ನಂಬಿಕೆಯಿರಿಸಿದ್ದ ಸುಮಾರು 7.5 ಕಾಶ್ಮೀರಿಗಳು ಪ್ರತ್ಯೇಕತಾವಾದಿಗಳಿಗೆ ತಿರುಗಿಬಿದ್ದಿದ್ದಾರೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ತಮ್ಮ ದೈನಂದಿನ ಸಮಸ್ಯೆಗಳಿಗೆ ಉತ್ತಮ ಸರಕಾರವೊಂದರ ಅಗತ್ಯವಿದೆ ಎಂಬ ಪರಿಹಾರವನ್ನೂ ಕಂಡುಕೊಂಡಿದ್ದು, ಉತ್ಕೃಷ್ಟ ರಸ್ತೆ, ಉದ್ಯೋಗ ಮತ್ತು ನಾಗರಿಕ ಸೌಲಭ್ಯಗಳನ್ನು ಬಯಸುತ್ತಿದ್ದಾರೆ.

ಆಶ್ಚರ್ಯಕರ ಬೆಳವಣಿಗೆಯಲ್ಲಿ ಕಣಿವೆಯ ಎರಡು ಹಾಗೂ ಜಮ್ಮುವಿನ ನಾಲ್ಕು ಕ್ಷೇತ್ರಗಳಲ್ಲಿ ಭಾನುವಾರ ಶೇಕಡಾ 66ಕ್ಕೂ ಹೆಚ್ಚು ಮತದಾನ ನಡೆದಿತ್ತು. ಇದರಿಂದಾಗಿ ಮೊದಲ ಹಂತದ ಮತದಾನಕ್ಕಿಂತ ಇದು ಒಂದು ಪ್ರತಿಶತ ಹೆಚ್ಚಿದಂತಾಗಿದ್ದು, ಪ್ರತ್ಯೇಕತಾವಾದಿಗಳಲ್ಲಿ ನಡುಕ ಹುಟ್ಟತೊಡಗಿದೆ.

ಇದರಿಂದ ಪ್ರತ್ಯೇಕತಾವಾದಿಗಳಿಗೆ ತೀವ್ರ ಆಘಾತವಾಗಿದ್ದು, ಅವರ ಪ್ರಶ್ನೆಗಳಿಗೆ ಸಂಪೂರ್ಣ ಉತ್ತರ ಇನ್ನೂ ಸಿಕ್ಕಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

"ತಟಸ್ಥ ವೀಕ್ಷಕರು ಮತ್ತು ಪತ್ರಕರ್ತರು ಕೂಡ ಈ ಬಾರಿಯ ಚುನಾವಣೆಯು ಚಳುವಳಿ, ಕ್ರಾಂತಿಯ ಕಾರಣಗಳಿಂದ ಕಳಾಹೀನವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಮತದಾರರು ಆಶ್ಚರ್ಯ ಮ‌ೂಡಿಸಿದ್ದಾರೆ" ಎಂದು ಇಸ್ಲಾಮಿಕ್ ಯ‌ೂನಿವರ್ಸಿಟಿಯ ರವೂಫ್ ರಸೂಲ್ ಹೆಚ್ಚಿನ ಮತದಾನವಾದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.

"ಈಗಲಾದರೂ ನೈಜ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಪ್ರತ್ಯೇಕತಾವಾದಿಗಳಿಗಿದೆ. ಸ್ವಾತಂತ್ರ್ಯ ಮತ್ತು ಉಪ-ರಾಷ್ಟ್ರಗಳ ಕಲ್ಪನೆ ನಿಸ್ಸಂಶಯವಾಗಿ ಎಲ್ಲರಿಗೂ ಸ್ಫೂರ್ತಿ ತಂದಿದೆ ಮತ್ತು ಕಾಶ್ಮೀರದ ಜನತೆಗೆ ಬೇರೆ ಮಾರ್ಗವೇ ಇಲ್ಲ" ಎಂದು ರವೂಫ್ ಸ್ವಾತಂತ್ರ್ಯ ಮತ್ತು ಪ್ರತ್ಯೇಕತಾವಾದಿಗಳ ಬಗ್ಗೆ ಹೇಳಿದರು.

"ಅವರು ಕಾಶ್ಮೀರಿಗಳನ್ನು ಅರ್ಥ ಮಾಡಿಕೊಂಡಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಅಲ್ಲಿನವರಿಗೆ ಮ‌ೂಲಭೂತ ಸೌಲಭ್ಯಗಳ ಅಗತ್ಯವಿದೆ. ಈ ಬಗ್ಗೆ ಪ್ರತ್ಯೇಕತಾವಾದಿಗಳಲ್ಲಿ ಯಾವುದೇ ಭರವಸೆಗಳಿಲ್ಲ" ಎಂದು ನಿವೃತ್ತ ಶಿಕ್ಷಕ ಎಂ.ವೈ. ಖಾದಿರಿ ಅಭಿಪ್ರಾಯ.

"ರಾಜಕೀಯ ಧ್ಯೇಯೋದ್ದೇಶ ಮತ್ತು ನಾಗರಿಕ ಸವಲತ್ತುಗಳನ್ನು ನಿರ್ಣಯಿಸುವಲ್ಲಿ ಪ್ರತ್ಯೇಕತಾವಾದಿ ಮುಖಂಡರು ಗೊಂದಲ ಹಾಗೂ ಅಸ್ಪಷ್ಟತೆಯಲ್ಲಿದ್ದಾರೆ" ಎಂದು ರಾಜಕೀಯ ಶಾಸ್ತ್ರ ಶಿಕ್ಷಕ ಇರ್ಷಾದ್ ಅಹ್ಮದ್ ಶಾ ಲೆಕ್ಕಾಚಾರ.

"ಕೇವಲ ರಾಜಕೀಯದಲ್ಲಿ ಮತಗಳ ಆಟ ನಡೆಸುವವರಿಂದ ಪ್ರತ್ಯೇಕತಾವಾದಿಗಳು ಅನಿರೀಕ್ಷಿತ ಹಿನ್ನಡೆ ಅನುಭವಿಸಿದ್ದಾರೆ. ಅವರಲ್ಲಿ ನಿಜಕ್ಕೂ ಅಂತಹ ಉದ್ದೇಶಗಳಿದ್ದರೆ ತಿರುಗಿ ಬೀಳಬೇಕು ಮತ್ತು ತಮ್ಮ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು" ಎಂದು ಮಾಜಿ ಸೈನಿಕ ಅಜೀಜ್ ಖಾನ್ ಅಭಿಪ್ರಾಯ.

ಭಾರತವು ರಾಜ್ಯದಲ್ಲಿ ಅಧಿಕಾರ ನಡೆಸುವುದನ್ನು ವಿರೋಧಿಸಿ ಮತದಾನ ಬಹಿಷ್ಕರಿಸಬೇಕೆಂದು ಪ್ರತ್ಯೇಕತಾವಾದಿ ಮುಖಂಡರು ಜೈಲಿನಿಂದಲೇ ಕರೆ ನೀಡಿದ್ದರು. ಆದರೂ ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯಲು ಪ್ರತ್ಯೇಕತಾವಾದಿ ಮುಖಂಡರು ಜೈಲಿನಲ್ಲಿರುವುದೇ ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ.

"ಯಾವುದೇ ನಿರ್ಧಾರಕ್ಕೆ ಬರಲು ಕಾಲ ಪಕ್ವವಾಗಿಲ್ಲ. ಇನ್ನೂ ಐದು ಹಂತದ ಚುನಾವಣೆಗಳು ಬಾಕಿ ಉಳಿದಿವೆ" ಎಂದು ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಾಜಾದ್ ಘನಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೆಹಬೂಬಾ ಮುಫ್ತಿ ಬೆಂಗಾವಲು ಪಡೆ ಮೇಲೆ ದಾಳಿ
ಜಮ್ಮು ಕಾಶ್ಮೀರ: ಎರಡನೇ ಹಂತದ ಮತದಾನ ಆರಂಭ
ಛತ್ತೀಸ್‌ಗಢ: 478 ಮತದಾರರು 510 ಮತಗಳು!
'ಮದರ್ ಥೆರೆಸಾ'-ಚೋಟೇ ಭಯ್ಯಾ ನಡುವೆ ಹಣಾಹಣಿ
ದೆಹಲಿ, ಛತ್ತೀಸ್, ಎಂಪಿಯಲ್ಲಿ ಬಿಜೆಪಿ ಮುನ್ನಡೆ
ಛತ್ತೀಸ್‌ಗಢ: ದ್ವಿತೀಯ ಹಂತದಲ್ಲಿ ಶೇ.68 ಮತದಾನ