ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಕಾಶ್ಮೀರ: 7ನೆ ಹಂತದ ಮತದಾನಕ್ಕೆ ಅಧಿಸೂಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರ: 7ನೆ ಹಂತದ ಮತದಾನಕ್ಕೆ ಅಧಿಸೂಚನೆ
ಜಮ್ಮುಕಾಶ್ಮೀರದ 21 ಕ್ಷೇತ್ರಗಳಿಗೆ ನಡೆಯಲಿರುವ ಏಳನೆ ಮತ್ತು ಕೊನೆಯ ಹಂತದ ಚುನಾವಣೆಗಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಕೊನೆಯ ಹಂತದಲ್ಲಿ ಶ್ರೀನಗರ, ಸಾಂಬ ಮತ್ತು ಜಮ್ಮು ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್.ಎನ್. ವೋರಾ ಅವರು ಬುಧವಾರ ಅಧಿಸೂಚನೆ ಹೊರಡಿಸಿರುವುದಾಗಿ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಡಿಸೆಂಬರ್ 24ರಂದು ನಡೆಯಲಿರುವ ಚುನಾವಣೆಯಲ್ಲಿ ಶ್ರೀನಗರದ ಹಜ್ರತ್‌ಬಲ್, ಈದ್ಗಾ, ಖನ್ಯಾರ್, ಹಬ್ಬ ಕಾದಲ್, ಅಮಿರ ಕಾದಲ್, ಸೋನಾವರ್ ಮತ್ತು ಬಟಮಲೂ ಕ್ಷೇತ್ರಗಳು, ಸಾಂಬಾ ಜಿಲ್ಲೆಯ ವಿಜಯ್‌ಪುರ ಹಾಗೂ ಜಮ್ಮು ಜಿಲ್ಲೆಯ ನಗ್ರೋತ, ಗಾಂಧಿನಗರ್, ಜಮ್ಮು ಪಶ್ಚಿಮ, ಜಮ್ಮು ಪೂರ್ವ, ಬಿಶ್ನಾ, ಆರ್.ಎಸ್.ಪುರ, ಸುಚೇತ್‌ಗಢ, ರಾಯ್‌ಪುರ ದೋಮಮ, ಅಕ್ತನೂರ್ ಮತ್ತು ಚಂಬ್ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಡಿಸೆಂಬರ್ 3 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ. ನಾಮಪತ್ರಗಳ ಪರಿಶೀಲನೆಯನ್ನು ಮರುದಿನ ಮಾಡಲಾಗುವುದು. ನಾಮಪತ್ರ ಹಿಂತೆಗೆತಕ್ಕೆ ಡಿಸೆಂಬರ್ ಆರು ಕೊನೆಯ ದಿನ.

21 ಕ್ಷೇತ್ರಗಳಲ್ಲಿ 1,872 ಮತದಾನ ಕೇಂದ್ರಗಳಿದ್ದು, ಸುಮಾರು 16,91,797 ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಮತಎಣಿಕೆ ಡಿಸೆಂಬರ್ 28ರಂದು ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿಯಲ್ಲಿ ಮೋದಿ ರ‌್ಯಾಲಿಗೆ ಅನುಮತಿಯಿಲ್ಲ!
ಪ್ರತ್ಯೇಕತಾವಾದಿಗಳನ್ನು ತಿರಸ್ಕರಿಸಿದ ಮತದಾರ?
ಮೆಹಬೂಬಾ ಮುಫ್ತಿ ಬೆಂಗಾವಲು ಪಡೆ ಮೇಲೆ ದಾಳಿ
ಜಮ್ಮು ಕಾಶ್ಮೀರ: ಎರಡನೇ ಹಂತದ ಮತದಾನ ಆರಂಭ
ಛತ್ತೀಸ್‌ಗಢ: 478 ಮತದಾರರು 510 ಮತಗಳು!
'ಮದರ್ ಥೆರೆಸಾ'-ಚೋಟೇ ಭಯ್ಯಾ ನಡುವೆ ಹಣಾಹಣಿ