ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಮಧ್ಯಪ್ರದೇಶ ಚುನಾವಣೆ: ಬಿರುಸಿನ ಮತದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧ್ಯಪ್ರದೇಶ ಚುನಾವಣೆ: ಬಿರುಸಿನ ಮತದಾನ
ವಾಣಿಜ್ಯ ನಗರಿ ಮುಂಬೈಯಲ್ಲಿ ಭಯೋತ್ಪಾದಕ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯೊಂದಿಗೆ ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಬೆಳಿಗ್ಗೆ ಮತದಾನ ಆರಂಭಗೊಂಡಿದೆ.

ಭಾರೀ ಚಳಿ ಹವಾಮಾನ ಇದ್ದ ಪರಿಣಾಮವಾಗಿ ಬೆಳಿಗ್ಗೆ 8ಗಂಟೆಗೆ ಮತದಾನ ಆರಂಭಗೊಂಡಿದ್ದರೂ ಕೂಡ, ಮತದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಆದರೆ 9ಗಂಟೆಯ ಬಳಿಕ ಮತಗಟ್ಟೆಯ ಹೊರಗೆ ಉದ್ದನೆಯ ಸಾಲು ಕಂಡು ಬರುವ ಮೂಲಕ, ಮತದಾರರು ಮತದಾನದಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದ ಡಕಾಯಿತರ ಕಣಿವೆ ಎಂದೇ ಪ್ರಸಿದ್ಧಿಯಾದ ಚಂಬಲ್ ಹಾಗೂ ಮಹಾಕೌಶಲ್, ಮಾಲ್ವಾ ಸೇರಿದಂತೆ 230 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, 3180 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭುದ್ನಿ ಕ್ಷೇತ್ರದಲ್ಲಿ ತಮ್ಮ ಮತವನ್ನು ಚಲಾಯಿಸಿದರು. ಅದೇ ರೀತಿ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸುರೇಶ್ ಪಚೌರಿ, ವಿರೋಧ ಪಕ್ಷದ ವರಿಷ್ಠೆ ಜಮುನಾ ದೇವಿ, ಲೋಕೋಪಯೋಗಿ ಸಚಿವ ಕೈಲಾಶ್ ವಿಜಯ‌‌್, ಭಾರತೀಯ ಜನ ಶಕ್ತಿ ವರಿಷ್ಠೆ ಉಮಾ ಭಾರತಿ ಸೇರಿದಂತೆ ಹಲವಾರು ಗಣ್ಯರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ತಮ್ಮ ಮತ ಚಲಾಯಿಸಿದರು.

ಬಿಗಿ ಬಂದೋಬಸ್ತ್: ರಾಜ್ಯಾದ್ಯಂತ ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳಾದ ಬೆತುಲ್, ಡಾಟಿಯಾ, ಹಾರ್ದಾ, ತಿಕಾಮಗಢ್, ರಟ್ನಾಲಾಮ್ ಹಾಗೂ ಸಿಧಿ ಕ್ಷೇತ್ರಗಳಲ್ಲಿ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಯ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

1,374 ಪಕ್ಷೇತರರು ಸೇರಿದಂತೆ ಒಟ್ಟು 3,179 ಅಭ್ಯರ್ಥಿಗಳ ಹಣೆ ಬರಹ ಇಂದು ಮತಪೆಟ್ಟಿಗೆ ಸೇರಿಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಆಡಳಿತರೂಢ ಬಿಜೆಪಿ 228 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಬಹುಜನ್ ಸಮಾಜ ಪಕ್ಷ ಎಲ್ಲಾ 230ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ. ಸಮಾಜವಾದಿ ಪಕ್ಷ 225, ಬಿಜೆಎಸ್ 215 ಹಾಗೂ ಸಮಾನತಾ ದಳ 75ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಚಾರದಲ್ಲಿ ಒಬಾಮಾರನ್ನು ಹಿಂಬಾಲಿಸುತ್ತಿರುವ ಅಡ್ವಾಣಿ
ಕಾಶ್ಮೀರ: 7ನೆ ಹಂತದ ಮತದಾನಕ್ಕೆ ಅಧಿಸೂಚನೆ
ದೆಹಲಿಯಲ್ಲಿ ಮೋದಿ ರ‌್ಯಾಲಿಗೆ ಅನುಮತಿಯಿಲ್ಲ!
ಪ್ರತ್ಯೇಕತಾವಾದಿಗಳನ್ನು ತಿರಸ್ಕರಿಸಿದ ಮತದಾರ?
ಮೆಹಬೂಬಾ ಮುಫ್ತಿ ಬೆಂಗಾವಲು ಪಡೆ ಮೇಲೆ ದಾಳಿ
ಜಮ್ಮು ಕಾಶ್ಮೀರ: ಎರಡನೇ ಹಂತದ ಮತದಾನ ಆರಂಭ