ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಮಧ್ಯಪ್ರದೇಶದಲ್ಲಿ ಹಿಂಸಾಚಾರದ ಮತದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧ್ಯಪ್ರದೇಶದಲ್ಲಿ ಹಿಂಸಾಚಾರದ ಮತದಾನ
ಭೋಪಾಲ: ಮುಂಬೈಯಲ್ಲಿ ನಡೆದಿರುವ ಉಗ್ರರ ದಾಳಿಯಿಂದ ರಾಷ್ಟ್ರವಿಡಿ ತಲ್ಲಣಿಸಿದ್ದರೂ, ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯು ಹಿಂಸಾಚಾರದಿಂದ ಕೂಡಿತ್ತು ಎಂಬುದಾಗಿ ವರದಿಗಳು ಹೇಳಿವೆ.

ಭಿಂಡ್ ಜಿಲ್ಲಯ ಲಹರ್ ಕ್ಷೇತ್ರದಲ್ಲಿ ಪ್ರಿಸೈಡಿಂಗ್ ಆಫೀಸರ್ ಒಬ್ಬರ ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡಿರುವ ಅವರನ್ನು ಚಿಕಿತ್ಸೆಗಾಗಿ ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೊಣ್ ಪೊಲೀಸ್ ಠಾಣಾ ವ್ಯಾಪ್ತಿಯ ಧಾಮೋಲೆ ಕಿ ಮಧಯಿಯ ಮತಗಟ್ಟೆಯಲ್ಲಿ ಈ ದುಷ್ಕೃತ್ಯ ನಡೆಸಲಾಗಿದ್ದು, ಅಪರಿಚಿತರು ಗುಂಡು ಹಾರಿಸಿರುವುದಾಗಿ ಹೇಳಲಾಗಿದೆ.

ಖಿಲ್ಚಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಎಸ್ಪಿ ಕಾರ್ಯಕರ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

228 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 1,374 ಪಕ್ಷೇತರರು ಸೇರಿದಂತೆ ಒಟ್ಟು 3,179 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಆಡಳಿತರೂಢ ಬಿಜೆಪಿ ಸ್ಪರ್ಧಿಸಿವೆ. ಬಹುಜನ್ ಸಮಾಜ ಪಕ್ಷ ಎಲ್ಲಾ 230 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಆಖಾಡಕ್ಕೆ ಇಳಿಸಿದೆ. ಸಮಾಜವಾದಿ ಪಕ್ಷ 225, ಬಿಜೆಎಸ್ 215 ಹಾಗೂ ಸಮಾನತಾ ದಳ 75ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಧ್ಯಪ್ರದೇಶ ಚುನಾವಣೆ: ಬಿರುಸಿನ ಮತದಾನ
ಪ್ರಚಾರದಲ್ಲಿ ಒಬಾಮಾರನ್ನು ಹಿಂಬಾಲಿಸುತ್ತಿರುವ ಅಡ್ವಾಣಿ
ಕಾಶ್ಮೀರ: 7ನೆ ಹಂತದ ಮತದಾನಕ್ಕೆ ಅಧಿಸೂಚನೆ
ದೆಹಲಿಯಲ್ಲಿ ಮೋದಿ ರ‌್ಯಾಲಿಗೆ ಅನುಮತಿಯಿಲ್ಲ!
ಪ್ರತ್ಯೇಕತಾವಾದಿಗಳನ್ನು ತಿರಸ್ಕರಿಸಿದ ಮತದಾರ?
ಮೆಹಬೂಬಾ ಮುಫ್ತಿ ಬೆಂಗಾವಲು ಪಡೆ ಮೇಲೆ ದಾಳಿ