ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ದೆಹಲಿ: ಬಿಗಿ ಭದ್ರತೆ ನಡುವೆ ಮತದಾನ ಮುಕ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ: ಬಿಗಿ ಭದ್ರತೆ ನಡುವೆ ಮತದಾನ ಮುಕ್ತಾಯ
ಬಿಗಿ ಭದ್ರತೆಯ ನಡುವೆ ದೆಹಲಿಯ 69 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಬೆಳಿಗ್ಗೆ ಆರಂಭಗೊಂಡ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ವಾಣಿಜ್ಯ ನಗರಿ ಮುಂಬೈಯಲ್ಲಿ ಭಯೋತ್ಪಾದಕರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ರಾಜಧಾನಿಯಾದ್ಯಂತ ಬಿಗಿ ಬಂದೋಬಸ್ತ್‌ನಲ್ಲಿ ಮತದಾನ ನಡೆಸಲಾಗಿತ್ತು. ಮಧ್ನಾಹ್ನದವರೆಗೆ ಶೇ.45ರಷ್ಟು ಮತದಾನವಾಗಿತ್ತು.

ಕೆಲವು ಪ್ರದೇಶಗಳಲ್ಲಿ ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ, ಎಲ್ಲೆಡೆ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ತಿಳಿಸಿದ ಚುನಾವಣಾಧಿಕಾರಿಗಳು, ಮುಂಬೈ ಟೆರರ್ ದಾಳಿಯ ಅಂತ್ಯದ ಘಟನಾವಳಿಗಳನ್ನು ವೀಕ್ಷಿಸುವುದರಲ್ಲೇ ಮಗ್ನರಾಗಿದ್ದ ಜನತೆ ಮತಗಟ್ಟೆಗಳಿಗೆ ನಿಧಾನವಾಗಿ ಆಗಮಿಸಿದ್ದರು ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸೇರಿದಂತೆ ಒಟ್ಟು 863 ಅಭ್ಯರ್ಥಿಗಳ ಹಣಿ ಬರಹ ಇದೀಗ ಮತಯಂತ್ರದಲ್ಲಿ ಭದ್ರವಾಗಿದೆ. ದೆಹಲಿಯ 70ಕ್ಷೇತ್ರಗಳಿದ್ದು, ರಾಜೀಂದರ್ ನಗರದ ಬಿಜೆಪಿ ಶಾಸಕ ಪುರಾಣ್ ಚಾಂದ್ ಯೋಗಿಯ ಸಾವಿನಿಂದಾಗಿ ಆ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

51ಸಾವಿರಕ್ಕಿಂತಲೂ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನೆರೆಯ ಉತ್ತರಪ್ರದೇಶ, ಹರಿಯಾಣಗಳಿಂದ 18ಸಾವಿರ ಗೃಹರಕ್ಷಕ ದಳದವರೂ ಇದರಲ್ಲಿ ಸೇರಿದ್ದಾರೆ. 346ಮತಗಟ್ಟೆಗಳನ್ನು ಅತಿ ಸೂಕ್ಷ್ಮ, 1218ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿತ್ತು.

ಕಳೆದ ಒಂದು ದಶಕಗಳಿಂದ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ದೆಹಲಿಯ ಅಧಿಕಾರದ ಗದ್ದುಗೆಯನ್ನು ಕಸಿಯುತ್ತ ಬಿಜೆಪಿ ಚಿತ್ತ ನೆಟ್ಟಿದ್ದು, ಅಧಿಕಾರ ಗದ್ದುಗೆ ಯಾರು ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿ ಚುನಾವಣೆ: ಮತದಾನ ಆರಂಭ
ಮಧ್ಯಪ್ರದೇಶದಲ್ಲಿ ಹಿಂಸಾಚಾರದ ಮತದಾನ
ಮಧ್ಯಪ್ರದೇಶ ಚುನಾವಣೆ: ಬಿರುಸಿನ ಮತದಾನ
ಪ್ರಚಾರದಲ್ಲಿ ಒಬಾಮಾರನ್ನು ಹಿಂಬಾಲಿಸುತ್ತಿರುವ ಅಡ್ವಾಣಿ
ಕಾಶ್ಮೀರ: 7ನೆ ಹಂತದ ಮತದಾನಕ್ಕೆ ಅಧಿಸೂಚನೆ
ದೆಹಲಿಯಲ್ಲಿ ಮೋದಿ ರ‌್ಯಾಲಿಗೆ ಅನುಮತಿಯಿಲ್ಲ!