ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಕಾಶ್ಮೀರ: ತೃತೀಯ ಹಂತದ ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರ: ತೃತೀಯ ಹಂತದ ಮತದಾನ ಆರಂಭ
ಜಮ್ಮು ಕಾಶ್ಮೀರಲ್ಲಿ ತೃತೀಯ ಹಂತದ ಮತದಾನ ಆರಂಭವಾಗಿದ್ದು, ಬಿಗಿ ಭದ್ರತೆಯಲ್ಲಿ ಸೊನ್ನೆ ಡಿಗ್ರಿಯ ಭೀಕರ ಚಳಿಯ ನಡುವೆ ಭಾನುವಾರ ಮುಂಜಾನೆ ಮತದಾನ ಆರಂಭವಾಗಿದೆ.

ಅಸಾಧ್ಯ ಚಳಿಯಿಂದ ಭಾದಿತವಾಗಿರುವ ಕಾಶ್ಮೀರದಲ್ಲಿ ಆರಂಭಿಕ ಹಂತದ ಮತದಾನ ಅತ್ಯಂತ ಮಂದಗತಿಯಿಂದ ಸಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಅದೇನೇ ಇದ್ದರೂ ಮತಗಟ್ಟೆಯ ಅಧಿಕಾರಿಗಳು ತಮ್ಮ ಕಾಯಕವನ್ನು ಮುಂಜಾನೆ 7.30ಕ್ಕೆ ಆರಂಭಿಸಿದ್ದಾರೆ.

ಇಂದು 448 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ರಾಜ್ಯ ಪೊಲೀಸರಲ್ಲದೆ, ಹೆಚ್ಚುವರಿ 109 ಕಂಪೆನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಕರ್ನಾ, ಕುಪ್ವಾರ, ಲೋಲಾಹ್, ಹಂದ್ವಾರ ಮತ್ತು ಲಂಗಾಟೆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, 1,63,389 ಮಹಿಳೆಯರು ಸೇರಿದಂತೆ 3,40,000 ಮಂದಿ ಇಂದಿನ ಮತದಾನಕ್ಕೆ ಅರ್ಹರಾಗಿದ್ದಾರೆ.

ಐವರು ಮಹಿಳೆಯರು ಸೇರಿದಂತೆ 71 ಮಂದಿ ಹುರಿಯಾಳುಗಳು ಕಣದಲ್ಲಿದ್ದಾರೆ. 2002ರ ಚುನಾವಣೆಯಲ್ಲಿ 43 ಅಭ್ಯರ್ಥಿಗಳು ಕಣದಲ್ಲಿದ್ದರು.

ರಾಜ್ಯದಲ್ಲಿನ ಉದ್ವಿಗ್ನ ಸ್ಥಿತಿಯ ಹಿನ್ನೆಲೆಯಲ್ಲಿ ಒಟ್ಟು ಏಳು ಹಂತಗಳ ಚುನಾವಣೆ ಘೋಷಣೆಯಾಗಿದ್ದು, ಭಾನುವಾದ ತೃತೀಯ ಹಂತದಲ್ಲಿ ಐದು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿ: ಬಿಗಿ ಭದ್ರತೆ ನಡುವೆ ಮತದಾನ ಮುಕ್ತಾಯ
ದೆಹಲಿ ಚುನಾವಣೆ: ಮತದಾನ ಆರಂಭ
ಮಧ್ಯಪ್ರದೇಶದಲ್ಲಿ ಹಿಂಸಾಚಾರದ ಮತದಾನ
ಮಧ್ಯಪ್ರದೇಶ ಚುನಾವಣೆ: ಬಿರುಸಿನ ಮತದಾನ
ಪ್ರಚಾರದಲ್ಲಿ ಒಬಾಮಾರನ್ನು ಹಿಂಬಾಲಿಸುತ್ತಿರುವ ಅಡ್ವಾಣಿ
ಕಾಶ್ಮೀರ: 7ನೆ ಹಂತದ ಮತದಾನಕ್ಕೆ ಅಧಿಸೂಚನೆ