ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಸೀಟು: ಕಾಂಗ್ರೆಸ್-ತೃಣಮೂಲ ಒಪ್ಪಂದ ಅಂತಿಮ
ಮತಸಮರ
ಮುಂಬರುವ ಲೋಕಸಭಾ ಚುನಾವಣಾ ಸ್ಫರ್ಧೆಗಾಗಿ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನುಡುವಿನ ಸೀಟು ಹಂಚಿಕೆ ಒಪ್ಪಂದ ಅಂತಿಮ ರೂಪು ಪಡೆದಿದೆ. ಈ ಮೂಲಕ ಉಭಯ ಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಎಡರಂಗಗಳಿಗೆ ಸಡ್ಡು ಹೊಡೆಯಲು ಸನ್ನದ್ಧವಾಗಿದೆ. ಸೀಟು ಹಂಚಿಕೆ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್‌ಗೆ ತೃಣಮೂಲ ಕಾಂಗ್ರೆಸ್ ವರಿಷ್ಠೆ 48 ಗಂಟೆಗಳ ಗಡುವು ನೀಡಿದ್ದರು.

ಭಾರೀ ಚರ್ಚೆಯ ಬಳಿಕ ಕಾಂಗ್ರೆಸ್ ಕೊನೆಗೂ ತೃಣಮೂಲದ ಸೀಟು ಹಂಚಿಕೆ ಸಿದ್ಧಾಂತವನ್ನು ಒಪ್ಪಿದ್ದು, 42 ರಲ್ಲಿ ಕಾಂಗ್ರೆಸ್ 14 ಸ್ಥಾನಗಳಲ್ಲಿ ಸ್ಫರ್ಧಿಸಿದರೆ, ತೃಣ ಮೂಲವು 28 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

"ಸೀಟು ಹಂಚಿಕೆ ಅಂತಿಮಗೊಂಡಿದೆ ಮತ್ತು ಕಾಂಗ್ರೆಸ್ 14 ಸ್ಥಾನಗಳಲ್ಲಿ ಸ್ಫರ್ಧಿಸಲಿದೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ಕೇಶವ ರಾವ್ ಹೇಳಿದ್ದಾರೆ. ಈ ಕುರಿತ ಅಧಿಕೃತ ಘೋಷಣೆಯು ಯಾವುದೇ ಕ್ಷಣದಲ್ಲಿ ಹೊರಬೀಳಬಹುದು ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮಬಂಗಾಳ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರ ಪ್ರತಿನಿಧಿ ಸುಕೇಂದು ಶೇಕರ್ ರಾಯ್ ಅವರು ಮಮತಾರನ್ನು ಭೇಟಿಯಾಗಿ ಸೀಟು ಹಂಚಿಕೆ ಸಿದ್ಧಾಂತಕ್ಕೆ ಕಾಂಗ್ರೆಸ್‌ನ ಒಪ್ಪಿಗೆಯನ್ನು ಸೂಚಿಸಿದರು.