ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಓಟಿಗಾಗಿ ನೋಟು: ಮುಂಚೂಣಿಯಲ್ಲಿ ಕರ್ನಾಟಕ!
ಮತಸಮರ
ಚುನಾವಣೆಯ ವೇಳೆಗೆ ವೋಟಿಗಾಗಿ ನೋಟು ಹಂಚುವಿಕೆಯಲ್ಲಿ ಕರ್ನಾಟಕವು ಪ್ರಥಮ ಸ್ಥಾನ ಪಡೆವ ಖುಖ್ಯಾತಿಯನ್ನು ಹೊಂದಿದೆ. ನೆರೆಯ ರಾಜ್ಯಗಳಾದ ಆಂಧ್ರ ಮತ್ತು ತಮಿಳ್ನಾಡುಗಳೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.

ಮಾಧ್ಯಮ ಅಧ್ಯಯನಗಳ ಕೇಂದ್ರ ನಡೆಸಿರುವ ಸಮೀಕ್ಷೆಯಲ್ಲಿ ಈ ಮೂರು ರಾಜ್ಯಗಳು ಪಟ್ಟಿಯ ಮೊದಲ ಸ್ಥಾನಗಳನ್ನು ಪಡೆದಿವೆ. ಕರ್ನಾಟಕದಲ್ಲಿ 2008ರಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ ಶೇ.47ರಷ್ಟು ಮತದಾರರು ಹಣ ಸ್ವೀಕರಿಸಿದ್ದಾರೆ. ಇದರಲ್ಲೂ ಹೆಚ್ಚಿನ 'ಫಲಾನುಭವಿ'ಗಳು ನಗರದ ಮಂದಿ ಎಂಬುದಾಗಿ ಅಧ್ಯಯನ ಹೇಳುತ್ತದೆ.

ಚುನಾವಣೆ ವೇಳೆ ಮತದಾರರನ್ನು ಓಲೈಸಲು ಹಣವನ್ನು ಬಳಸುತ್ತಿರುವುದು ಒಂದು ರಾಷ್ಟ್ರೀಯ ಪಿಡುಗು. ಇದು ಯುವಕರು ಮತ್ತು ಮುದುಕರು, ಬಡವರು ಶ್ರೀಮಂತರು, ನಗರ ಮತ್ತು ಹಳ್ಳಿ ಎಂಬ ಬೇಧಗಳಿಲ್ಲದೆ ಎಲ್ಲೆಡೆ ನಡೆಯುವ ವಿದ್ಯಮಾನ.

ಆಂಧ್ರ ಅತ್ಯಂತ ಕಾಸ್ಟ್ಲೀ ಸ್ಟೇಟ್!
ಅಧ್ಯಯನದ ಅಂದಾಜು ಪ್ರಕಾರ ಸುಮಾರು ಒಂದು ಸಾವಿರ ಕೋಟಿ ರೂಪಾಯಿಯಷ್ಟು ಮೊತ್ತವನ್ನು ಚುನಾವಣೆ ವೇಳೆ ಆಂಧ್ರಪ್ರದೇಶದಲ್ಲಿ ಚೆಲ್ಲಲಾಗುತ್ತದೆ. ಇದಲ್ಲದೆ ಭಾರತೀಯ ಇತಿಹಾಸದಲ್ಲೇ ಆಂಧ್ರಪ್ರದೇಶದ ಚುನಾವಣೆಯು ಅತ್ಯಂತ ದುಬಾರಿ ಚುನಾವಣೆ ಎಂಬುದಾಗಿಯೂ ಅಧ್ಯಯನ ಹೇಳಿದೆ.

ಅಂದಾಜುಗಳ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಮಾರು ಹತ್ತು ಸಾವಿರದಿಂದ ಹದಿನೈದು ಕೋಟಿ ಸಾವಿರ ರೂಪಾಯಿ ವಿನಿಯೋಗವಾಗಲಿದೆ. ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗವು ಹೆಚ್ಚೂ ಕಮ್ಮಿ ಸಮಸಮವಾಗಿ ಹಣವಿನಿಯೋಗಿಸುತ್ತವೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.