ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಪ್ರಧಾನಿ ಪಟ್ಟ ಆಕಾಂಕ್ಷಿಗಳಲ್ಲಿ ನಾನೂ ಇದ್ದೇನೆ: ಪವಾರ್
ಮತಸಮರ
PIB
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಯುಪಿಎ ಬಹುಮತ ಪಡೆಯುವಲ್ಲಿ ವಿಫಲವಾದಲ್ಲಿ ತೃತೀಯ ರಂಗದೊಂದಿಗೆ ಕೈಜೋಡಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂಬುದಾಗಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ.

"ನಮಗೆ ಬಹುಮತ ದೊರೆಯದಿದ್ದರೆ ನಾವು ತೃತೀಯ ರಂಗದೊಡನೆ ಮಾತನಾಡಬೇಕಾಗುತ್ತದೆ" ಎಂಬುದಾಗಿ ಪ್ರಧಾನ ಮಂತ್ರಿ ಪದಾಕಾಂಕ್ಷಿಯೂ ಆಗಿರುವ ಪವಾರ್ ಹೇಳಿದ್ದಾರೆ. ಎನ್‌ಸಿಪಿಯು ಪ್ರಸ್ತುತ ಅಧಿಕಾರದಲ್ಲಿರುವ ಯುಪಿಎಯ ಪ್ರಮುಖ ಅಂಗಪಕ್ಷವಾಗಿದೆ.

ಲೋಕಸಭೆಯಲ್ಲಿ 40ಕ್ಕಿಂತ 50ರಷ್ಟು ಸದಸ್ಯರನ್ನು ಹೊಂದಿರುವ ಎಡಪಕ್ಷಗಳು ತೃತೀಯ ರಂಗದ ಪ್ರಮುಖ ಭಾಗವಾಗಿವೆ ಎಂದು ಖಾಸಗಿ ವಾಹಿನಿಯೊಂದರೊಂದಿಗೆ ಮಾತನಾಡುತ್ತಿದ್ದ ಪವಾರ್ ಹೇಳಿದ್ದಾರೆ.

ಆಂಧ್ರ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದ ನಾಯಕರು ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಲು ಅವಕಾಶ ಪಡೆಯುತ್ತಿರುವಾಗ, ಮಹಾರಾಷ್ಟ್ರದವರಿಗೂ ಒಂದು ಅವಕಾಶ ನೀಡಬೇಕು ಎಂದು ಪವಾರ್ ಹೇಳಿದ್ದಾರೆ.

"ಆಂಧ್ರ, ಗುಜರಾತ್, ಕರ್ನಾಟಕದಂತಹ ರಾಜ್ಯಗಳಿಗೆ ಪ್ರಧಾನಿ ಕುರ್ಚಿಯನ್ನು ಅಲಂಕರಿಸುವ ಅವಕಾಶ ಲಭಿಸಿರುವಾಗ ಮಹಾರಾಷ್ಟ್ರಕ್ಕೂ ಒಂದು ಅವಕಾಶ ಲಭಿಸಬೇಕು ಎಂಬ ಭಾವನೆಯೊಂದು ಮಹಾರಾಷ್ಟ್ರಿಗರಲ್ಲಿದೆ" ಎಂದು ಪ್ರಧಾನಿ ಪಟ್ಟದ ಪ್ರಬಲ ಆಕಾಂಕ್ಷಿ ಪವಾರ್ ಹೇಳಿದ್ದಾರೆ.

ಆದರೆ, ನೀವು ಸೀಮಿತ ಸ್ಥಾನಗಳಿಗೆ ಸ್ಫರ್ಧಿಸುತ್ತಿರುವ ವೇಳೆಗೆ ಪ್ರಧಾನಿಯಾಗುವ ಕುರಿತು ಯೊಚಿಸುವಂತಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ. ನನ್ನ ಪಕ್ಷವು ಇಡಿಯ ರಾಷ್ಟ್ರದಲ್ಲಿ ಒಟ್ಟಾರೆಯಾಗಿ 30ರಿಂದ 35 ಸ್ಥಾನಗಳನ್ನು ಮಾತ್ರ ಗಳಿಸುತ್ತದೆ ಎಂದಾದರೆ, ಅಷ್ಟು ಸಣ್ಣ ಸಂಖ್ಯೆಯೊಂದಿಗೆ, ಅಂತಹ ಪಕ್ಷದ ನಾಯಕ ರಾಷ್ಟ್ರದ ಪ್ರಧಾನಿ ಹುದ್ದೆಯ ಜವಾಬ್ದಾರಿಯನ್ನು ಹೇಗೆ ಪಡೆಯಬಹುದು ಎಂದೂ ಅವರು ಪ್ರಶ್ನಿಸಿದ್ದಾರೆ.