ರಾಷ್ಟ್ರದ ಅಭಿವೃದ್ಧಿಗಾಗಿ ಇರುವ ಏಕೈಕ ಪರ್ಯಾಯ ತೃತೀಯ ರಂಗವಾಗಿದ್ದರೂ ಮುಂಬರುವ ಮಹಾಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಅದಕ್ಕೆ ಕಷ್ಟವಾಗಬಹುದು ಎಂಬುದಾಗಿ ನುರಿತ ಕಮ್ಯೂನಿಸ್ಟ್ ನಾಯಕ ಜ್ಯೋತಿ ಬಸು ಮಂಗಳವಾರ ಹೇಳಿದ್ದಾರೆ.
"ಕೇಂದ್ರದಲ್ಲಿ ತೃತೀಯ ರಂಗ ತಕ್ಷಣಕ್ಕೆ ಬರುವ ಅವಶ್ಯಕತೆ ಇದೆ. ಅದು ಫಲಿಸಿದರೆ ಈ ಬಾರಿ ಸಿಪಿಐ-ಎಂ ಸರ್ಕಾರದಲ್ಲಿ ಸೇರ್ಪಡೆಯಾಗಲು ಸಾಧ್ಯವಾಗಲಿದೆ" ಎಂಬುದಾಗಿ ಅವರು ಇಲ್ಲಿನ ತಮ್ಮ ಸಾಲ್ಟ್ ಲೇಕ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.
"ಅದೇನೇ ಇದ್ದರೂ ತೃತೀಯ ರಂಗ ಅಧಿಕಾರಕ್ಕೆ ಬರುವುದು ಅತ್ಯಂತ ಕಷ್ಟ. ನಾವು ಈ ಪ್ರಯೋಗಕ್ಕೆ 1996ರಲ್ಲಿ ಮುಂದಾಗಿ ವಿಫಲವಾಗಿದ್ದೇವೆ" ಎಂಬುದಾಗಿ ಪಶ್ಚಿಮಬಂಗಾಳದ ಮಾಜಿ ಮುಖ್ಯಮಂತ್ರಿ ನೆನಪಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ವಿರೋಧಿಸುತ್ತಿರುವ ಪಕ್ಷಗಳನ್ನು ಒಟ್ಟು ಮಾಡುತ್ತಿರುವ ತೃತೀಯ ರಂಗವು, ಈ ಮೂಲಕ ಸಮಾನ ಮನಸ್ಕರ ಮೈತ್ರಿಕೂಟವನ್ನು ರಚಿಸುತ್ತಿದೆ. ಕರ್ನಾಟಕದ ತುಮಕೂರಿನಲ್ಲಿ ಕಳೆದ ವಾರ ತುಮಕೂರಿನಲ್ಲಿ ಅನಾವರಣಗೊಳಿಸಲಾಗಿದೆ.
ಅದರೆ ನಿಜವಾಗಿಯೂ ಜನತೆಗಾಗಿ ಕಾರ್ಯಕೈಗೊಳ್ಳುವಂತ ಸರ್ಕಾರವನ್ನು ರೂಪಿಸುವ ಗುರಿಹೊಂದಿದ್ದರೆ, ತೃತೀಯ ರಂಗ ಮಾತ್ರ ಪರ್ಯಾಯ ಪರಿಹಾರ ಎಂದು 95ರ ಹರೆಯದ ಬಸು ನುಡಿದರು.