ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಮುಸ್ಲಿಮರಿಗೆ ನಟ ಸಂಜಯದತ್ ಮಸ್ಕಾ
ಮತಸಮರ
ರಾಷ್ಟ್ರಾದ್ಯಂತ ಚುನಾವಣಾ ಕಾವು ಏರುತ್ತಿದೆ. ಅಭ್ಯರ್ಥಿಗಳು ಶತಾಯಗತಾಯ ಗೆಲುವಿನ ಪ್ರಯತ್ನಕ್ಕಿಳಿದಿದ್ದಾರೆ. ಸಮಾಜವಾದಿ ಪಕ್ಷದ ವತಿಯಿಂದ ಲಕ್ನೋದಿಂದ ಸ್ಫರ್ಧಿಸಲು ಸರ್ವಸನ್ನದ್ಧವಾಗಿರುವ ಸಂಜಯ್‌ದತ್ ಕ್ಷೇತ್ರ ಸವಾರಿ ಹೊರಟಿದ್ದು ಮುಸ್ಲಿಮರ ಓಲೈಕೆಗೆ ಮುಂದಾಗಿದ್ದಾರೆ. ಮೊಹಲ್ಲಾಗಳನ್ನು ಭೇಟಿಯಾಗಿದ್ದು, ಮುಲ್ಲಾಗಳಿಗೆ ಮಸ್ಕಾ ಹಾಕಲು ಮುಂದಾಗಿದ್ದಾರೆ.

"ತನಗಾಗಿ ಪ್ರಾರ್ಥಿಸಲು ನಾನು ಮೌಲಾನರನ್ನು ವಿನಂತಿಸುತ್ತೇನೆ. ಸುಪ್ರೀಂ ಕೋರ್ಟ್ ತನಗೆ ಚುನಾವಣೆಗೆ ಸ್ಫರ್ಧಿಸಲು ಅವಕಾಶ ನೀಡುವಂತೆ ಪ್ರಾರ್ಥಿಸಲು ಕೋರುತ್ತೇನೆ" ಎಂಬುದಾಗಿ ಅವರು ತನ್ನ ಪ್ರವಾಸದ ವೇಳೆ ಹೇಳಿದ್ದಾರೆ. ನಗರದಲ್ಲಿ ಶೇ.23ರಷ್ಟು ಮುಸ್ಲಿಂ ಮತಗಳಿವೆ.

ಈದ್ ವೇಳೆ, ಸಂಜಯ್ ದತ್ ಎದುರಾಳಿ ಅಖಿಲೇಶ್ ದಾಸ್‌ಗುಪ್ತಾ ಅವರೂ ಸಹ ಇದೇ ಗಿಮಿಕ್ ಮಾಡಿದ್ದು, ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. "ಹಿಂದೂ-ಮುಸ್ಲಿಂ ಭ್ರಾತೃತ್ವವು ಈ ರಾಷ್ಟ್ರದ ಶಕ್ತಿ. ಹೆಗಲಿಗೆ ಹೆಗಲು ಕೊಡುವ ನಾವು ಯಾವಾಗಲೂ ಒಂದಾಗಿದ್ದೆವು, ಒಂದಾಗಿದ್ದೇವೆ ಮತ್ತು ಒಂದಾಗಿರುತ್ತೇವೆ" ಎಂದು ಬಿಎಸ್ಪಿ ಅಭ್ಯರ್ಥಿಯಾಗಿರುವ ದಾಸ್‌ಗುಪ್ತಾ ಹೇಳಿದ್ದರು.

ಆದರೆ, ಈ ಆಟವನ್ನು ಮೌಲಾನಗಳು ಚೆನ್ನಾಗಿ ತಿಳಿದಿದ್ದಾರೆ. ಅವರು ರಾಜಕೀಯವಾಗಿ ಸರಿಯಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಶಿಕ್ಷಣ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸಲು ಯಾವ ನಾಯಕರು ಪ್ರಯತ್ನಿಸುತ್ತಾರೋ ಅಂತಹವರಿಗೆ ಸಮುದಾಯವು ಮತಹಾಕಲಿದೆ ಎಂಬುದಾಗಿ ಮುಸ್ಲಿಂ ನಾಯಕ ಖಾಲಿದ್ ರಶೀದ್ ಹೇಳಿದ್ದಾರೆ.

ವಾಜಪೇಯಿ ಅವರ ಸ್ಫರ್ಧೆ ಇಲ್ಲದೆ ಬಿಜೆಪಿ ಕಳೆಗುಂದಿದೆ. ಹಾಗಾಗಿ ಮುಸ್ಲಿಮರು ಗ್ಲಾಮರಸ್ ಸಂಜಯ್ ದತ್ ಅಥವಾ ಹಣವಂತನಾಗಿರುವ ಪ್ರಭಾವಿ ಅಖಿಲೇಶ್ ಅವರತ್ತ ಒಲವು ತೋರಬಹುದು ಎಂಬುದು ಒಂದು ಲೆಕ್ಕಾಚಾರ.