ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಇದುವರೆಗಿನ ಸಮೀಕ್ಷೆ: ಯುಪಿಎ ಮುಂದೆ
ಮತಸಮರ
HariniWD
ಲೋಕಸಭೆ ಚುನಾವಣೆಯ ಕಾವು ನಿಧಾನವಾಗಿ ಏರುತ್ತಿರುವಂತೆಯೇ, ಪ್ರಮುಖ ಮಾಧ್ಯಮಗಳು, ಪ್ರಕಾಶನಗಳು ತಮ್ಮದೇ ಆದ ಸಮೀಕ್ಷೆ ಪ್ರಕಟಿಸಿದ್ದು, ಎಲ್ಲಾ ಸಮೀಕ್ಷೆಗಳು ಎದ್ದು ತೋರಿಸುತ್ತಿರುವ ಅಂಶವೆಂದರೆ, ಕೇಂದ್ರದಲ್ಲಿ ಯಾವುದೇ ಮೈತ್ರಿಕೂಟ ಅಥವಾ ಒಂದು ನಿರ್ದಿಷ್ಟ ಪಕ್ಷವು ತನ್ನ ಸ್ವಂತ ಬಲದಲ್ಲಿ ಅಧಿಕಾರಕ್ಕೇರುವುದಿಲ್ಲ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎಯ ಮುನ್ನಡೆ.

ಅತ್ಯಂತ ಕುತೂಹಲಕರ ಫಲಿತಾಂಶ ನಿರೀಕ್ಷಿಸಲಾಗಿರುವ, ಏಪ್ರಿಲ್ 16ರಿಂದ ಮೇ 13ರವರೆಗೆ ನಡೆಯುವ ದೇಶದ ಮಹಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎಯು ಬಿಜೆಪಿ ನೇತೃತ್ವದ ಎನ್‌ಡಿಎಗಿಂತ ಸಾಕಷ್ಟು ಮುಂದಿರುವುದು ಈ ಸಮೀಕ್ಷೆಗಳಲ್ಲಿ ವ್ಯಕ್ತವಾಗಿರುವ ಅಂಶ. ಈ ವರ್ಷ ಇದುವರೆಗೆ ನಡೆದಿರುವ ಸಮೀಕ್ಷೆಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಸ್ಟಾರ್ ನ್ಯೂಸ್ ನೀಲ್ಸನ್ ಸಮೀಕ್ಷೆ (ಮಾರ್ಚ್ 22)
ಯುಪಿಎ - 257
ಎನ್‌ಡಿಎ - 184
ಎಡ ರಂಗ- 34
ಬಿಎಸ್ಪಿ - 21
ಎಸ್ಪಿ - 30
ಇತರರು - 47

ಟೈಮ್ಸ್ ಆಫ್ ಇಂಡಿಯಾ (ಮಾರ್ಚ್ 6)
ಯುಪಿಎ - 201
ಎನ್‌ಡಿಎ - 195
ಎಡರಂಗ - 40
ಬಿಎಸ್ಪಿ - 34
ಎಸ್ಪಿ - 23
ಇತರರು - 50

ಡಿಎನ್ಎ ಪತ್ರಿಕೆ (ಮಾರ್ಚ್ 9)
ಯುಪಿಎ - 201
ಎನ್‌ಡಿಎ - 170
ಎಡರಂಗ - 22
ಬಿಎಸ್ಪಿ - 32
ಎಸ್ಪಿ - 31
ಇತರರು - 87

ಸಿಎನ್ಎನ್-ಐಬಿಎನ್ ಚಾನೆಲ್ ಮತ್ತು ಸಿಎಸ್‌ಡಿಎಸ್ (ಫೆ.21)
(ಇಲ್ಲಿ ಎಸ್ಪಿ ಯುಪಿಎ ಜತೆಗಿತ್ತು)
ಯುಪಿಎ - 215-235
ಎನ್‌ಡಿಎ - 165-185
ಇತರರು - 90-110