ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಕ್ರಿಮಿನಲ್ ಆರೋಪಿ ಸಂಸದರಿಗೆ ಪತ್ನಿಯರೇ ಈಗ ಅಸ್ತ್ರ!
ಮತಸಮರ
ಕಾನೂನಿನ ತೊಂದರೆಗಳನ್ನು ಎದುರಿಸುತ್ತಿರುವ ಪುರುಷ ರಾಜಕಾರಣಿಗಳಿಗೆ ತಮ್ಮ ಹೆಂಡತಿಯರು ಸುಲಭದ ಅಸ್ತ್ರವಾಗಿದ್ದಾರೆ. ಹಲವು ಆರೋಪಗಳನ್ನು ಎದುರಿಸುತ್ತಿರುವ ರಾಜಕಾರಣಿಗಳಲ್ಲಿ ಬಹುತೇಕರು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಆರೋಪಗಳಿಲ್ಲದೆ ಆಱಾಮವಾಗಿರುವ ತಮ್ಮ ಹೆಂಡತಿಯರ ಮೂಲಕ ಲಾಭವಾಗಿಸುತ್ತಿದ್ದಾರೆ. ಬಿಹಾರದಲ್ಲಿ ಇಂಥವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ತಾವು ಕಣಕ್ಕಿಳಿಯುವ ಬದಲಾಗಿ ಕಾನೂನು ತೊಡಕುಗಳಿಂದ ದೂರ ಉಳಿಯುವ ಸಲುವಾಗಿ ತಮ್ಮ ಪತ್ನಿಯರನ್ನು ಕಣಕ್ಕಿಳಿಸುತ್ತಿದ್ದಾರೆ.

ಆರು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಸಿವಾನ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಂಸದ ಮಹಮ್ಮದ್ ಶಹಾಬುದ್ದೀನ್ ಈಗ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಹಾಗಾಗಿ ಈ ಬಾರಿ ಅವರ ಪತ್ನಿ ಹಾಗೂ ಆರ್‌ಜೆಡಿ ಸದಸ್ಯೆ ಹೀನಾ ಶಹಬ್ ಈ ಬಾರಿ ಆರ್‌ಜೆಡಿಯಿಂದ ಟಿಕೆಟ್ ಪಡೆದಿದ್ದಾರೆ.

ಇನ್ನ ಕ್ರಿಮಿನಲ್ ರಾಜಕಾರಣಿ ಲೋಕಜನಶಕ್ತಿ ಪಕ್ಷದ ಸೂರಜ್ ಭಾನ್ ಬಲ್ಲ್ಯ ಕ್ಷೇತ್ರದಿಂದ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದರು. ಅವರು 1992ರಲ್ಲಿ ನಡೆದ ಕೊಲೆ ಆರೋಪದ ಹಿನ್ನೆಲೆಯಲ್ಲಿ ಆರು ವರ್ಷಗಳ ಕಾಲ ಚುನಾವಣೆಯಿಂದ ಬಹಿಷ್ಕರಿಸಲಾಗಿದೆ. ಈಗ ಅವರ ಪತ್ನಿ ಬಿಹಾರದ ನೇವಡಾ ಕ್ಷೇತ್ರದಿಂದ ಮುಂಬರುವ ಲೋಕಸಭಾ ಚುನಾವಣೆಯ ಕಣಕ್ಕಿಳಿದಿದ್ದಾರೆ. ಭಾನ್‌ಗೆ ಚುನಾವಣೆಯ ಹಿನ್ನೆಲೆಯಲ್ಲಿ ಈಗ ಜಾಮೀನು ದೊರೆತಿದೆ.

ಐಎಎಸ್ ಅಧಿಕಾರಿಯೊಬ್ಬರಿಗೆ ಚಿತ್ರಹಿಂಸೆ ನೀಡಿದ ಆರೋಪ ಹೊತ್ತು, ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಆನಂದ್ ಮೋಹನ್ ಅವರ ಪತ್ನಿ ಲವ್ಲೀ ಸಿಂಗ್ ಅವರೂ ಈಗ ಎರಡನೇ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. ಈ ಹಿಂದೆಯೂ ಪಕ್ಷೇತರರಾಗಿ ಸ್ಪರ್ಧಿಸಿ 1994ರ ಚುನಾವಣೆಯಲ್ಲಿ ಗೆದ್ದಿದ್ದರು.

ಅಲ್ಲದೆ, ಮ್ಯಾರ್ಕ್ಸ್‌ವಾದಿ ಅಜಿತ್ ಸರ್ಕಾರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್‌ಜೆಡಿಯ ಸಂಸದ ಪಪ್ಪು ಯಾದವ್ ಅವರ ಪತ್ನಿ ರಂಜೀತ್ ರಂಜನ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸಹರ್ಸಾ ಅಥವಾ ಮಾದೇಪುರ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿದೆ.