ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಕಾಂಗ್ರೆಸ್ ಅಭ್ಯರ್ಥಿಗಳಿಲ್ಲದೆ ದಿವಾಳಿಯಾಗಿದೆ: ವೆಂಕಯ್ಯ ನಾಯ್ಡು
ಮತಸಮರ
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳಿಲ್ಲದೆ ಕಾಂಗ್ರೆಸ್ ದಿವಾಳಿತನ ಎದುರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಮುಖಂಡ ಎಂ.ವೆಂಕಯ್ಯ ನಾಯ್ಡು ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ವಿಧಾನಸಭೆ ಟಿಕೆಟ್‌‌ಗಳು ಮಾರಾಟವಾಗಿವೆ ಎಂದು ಆರೋಪ ಮಾಡಿದ ಮಾರ್ಗರೇಟ್ ಆಳ್ವ ಅವರನ್ನೇ ಅತ್ತೂ ಕರೆದು ಅಭ್ಯರ್ಥಿ ಮಾಡಿರುವುದು ಆ ಪಕ್ಷದ ದಿವಾಳಿತನಕ್ಕೆ ಸಾಕ್ಷಿ ಎಂದರು.

ಟಿಕೆಟ್ ಮಾರಾಟದ ಆರೋಪ ಮಾಡಿದ್ದ ಆಳ್ವ ಅವರನ್ನು ಅಮಾನತು ಮಾಡಲಾಗಿತ್ತು. ಆಕೆ ತನ್ನ ಹೇಳಿಕೆ ವಾಪಸ್ ಪಡೆಯಲೇ ಇಲ್ಲ. ಇದೀಗ ಆಕೆಗೆ ಟಿಕೆಟ್ ನೀಡಲಾಗಿದೆ. ಹಾಗಾದರೆ, ಆಕೆ ಮಾಡಿದ್ದ ಆರೋಪಗಳೆಲ್ಲಾ ಸತ್ಯ ಎಂಬುದನ್ನು ಕಾಂಗ್ರೆಸ್ ಒಪ್ಪಿಕೊಂಡಂತಾಗಿದೆ ಎಂದು ಕಟುವಾಗಿ ಟೀಕಿಸಿದರು.

ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತಿಣುಕಾಡುತ್ತಿರುವುದು ನೋಡಿದರೆ ಆ ಪಕ್ಷ ಕೈಲಾಗದ ಅಸಹಾಯಕ ಸ್ಥಿತಿಗೆ ಬಂದು ತಲುಪಿರುವುದು ಸಾಬೀತಾಗಿದೆ ಎಂದು ತಿಳಿಸಿದರು.

ಹಿಂದುತ್ವದ ಬಗ್ಗೆ ಮಾತನಾಡುವವರ ಕೈ ಕಡಿಯಬೇಕು ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ವಿರುದ್ಧ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.