ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಡಿ.ಬಿ.ಚಂದ್ರೇಗೌಡ-ಶ್ರೀಕಂಠಯ್ಯ.ಶಿವರಾಮೇಗೌಡ ಬಿಜೆಪಿಗೆ
ಮತಸಮರ
NRB
ಗೊಂದಲದ ಗೂಡಾಗಿರುವ ಕಾಂಗ್ರೆಸ್‌ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಹಿರಿಯ ಮುಖಂಡರಾದ ಡಿ.ಬಿ.ಚಂದ್ರೇಗೌಡ, ಎಲ್.ಆರ್.ಶಿವರಾಮೇಗೌಡ ಹಾಗೂ ಎಚ್.ಸಿ.ಶ್ರೀಕಂಠಯ್ಯ ಗುರುವಾರ ಅಧಿಕೃತವಾಗಿ ಬಿಜೆಪಿ ಪಾಳಾಯಕ್ಕೆ ಸೇರ್ಪಡೆಗೊಂಡಿದ್ದಾರೆ.

ಆಡಳಿತರೂಢ ಭಾರತೀಯ ಜನತಾ ಪಕ್ಷದ ಆಪರೇಶನ್ ಕಮಲದ ಮುಂದುವರಿದ ಭಾಗ ಎಂಬಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರಿಗೆ ಗಾಳ ಹಾಕುವ ಮೂಲಕ ಬಿಜೆಪಿ ಹಿರಿಯ ಮುಖಂಡರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಡಿ.ಬಿ.ಚಂದ್ರೇಗೌಡ, ಶಿವರಾಮೇಗೌಡ, ಶ್ರೀಕಂಠಯ್ಯನವರು ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಉಡುಪಿ-ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಡಿಬಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದರು. ಅದೇ ರೀತಿ ಮಂಡ್ಯ ಕ್ಷೇತ್ರದಿಂದ ಶಿವರಾಮೇಗೌಡರು ಟಿಕೆಟ್‌ಗಾಗಿ ಕಾದಿದ್ದರು. ಆದರೆ ಮಂಡ್ಯದಿಂದ ಅಂಬರೀಷ್ ಪ್ರಬಲ ಆಕಾಂಕ್ಷಿಯಾಗಿದ್ದರಿಂದ ಹೈಕಮಾಂಡ್‌ಗೆ ಬಗೆಹರಿಸಲಾರದ ಕಗ್ಗಂಟಾಗಿತ್ತು. ಆ ಕಾರಣಕ್ಕಾಗಿಯೇ ಕಾಂಗ್ರೆಸ್ 2ನೇ ಪಟ್ಟಿ ಘೋಷಿಸಿದ್ದರು ಕೂಡ ಅದರಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲವಾಗಿತ್ತು.

ಕಾಂಗ್ರೆಸ್‌ನಲ್ಲಿ ಹಿರಿಯ ಮುಖಂಡರಿಗೆ ಯಾವ ಬೆಲೆ ಇಲ್ಲ, ಆ ಕಾರಣಕ್ಕಾಗಿ ನಾವು ನಮ್ಮ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ಡಿಬಿ ಈ ಮೊದಲೇ ಬಿಜೆಪಿ ಸೇರ್ಪಡೆಯ ಮುನ್ಸೂಚನೆ ನೀಡಿದ್ದರು. ಇದೀಗ ಟಿಕೆಟ್ ವಂಚಿತರಾದ ಅತೃಪ್ತ ಕಾಂಗ್ರೆಸ್ ಮುಖಂಡರು ಬಿಜೆಪಿ ಪಾಳಯಕ್ಕೆ ಜಿಗಿದಿದ್ದಾರೆ.