ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಚುನಾವಣೆ ಏನು-ಎತ್ತ? ನಿಮ್ಮ ಮತ ಇಲ್ಲಿ ಚಲಾಯಿಸಿ!
ಮತಸಮರ
WD
ಭಾರತದ 15ನೇ ಲೋಕಸಭೆಗಾಗಿ ಚುನಾವಣಾ ಮಹಾಭಾರತ ಯುದ್ಧದ ಶಂಖನಾದ ಮೊಳಗಿದೆ. ರಾಜಕೀಯ ಕದನ ರಂಗದಲ್ಲಿ ದಿನಕ್ಕೊಂದು ಮೈತ್ರಿ ಚಿಗಿತುಕೊಳ್ಳುತ್ತಿದೆ. ಯಾವುದೇ ಒಂದು ಪಕ್ಷವು ಸ್ವಂತ ಬಲದಲ್ಲಿ ಅಧಿಕಾರಕ್ಕೇರುವ ಲಕ್ಷಣಗಳ್ಯಾವುವೂ ಕಾಣಿಸುತ್ತಿಲ್ಲ. ತತ್ಪರಿಣಾಮವಾಗಿ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಹಾಗಿದ್ದರೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಮಹಾನ್ ಚುನಾವಣಾ ಸಮರವು ಯಾವ ಫಲಿತಾಂಶವನ್ನು ತಂದೊಡ್ಡಬಹುದು? ಪಕ್ಷಗಳ ಮೇಲಾಟ, ಸಣ್ಣ ಪುಟ್ಟ ಪಕ್ಷಗಳೇ ಕಿಂಗ್ ಮೇಕರ್‌ಗಳಾಗುವ ಪ್ರಕ್ರಿಯೆಯಲ್ಲಿ ಯಾರು ಕೊನೆಗೂ ಗೆಲುವಿನ ನಗೆ ಬೀರುತ್ತಾರೆ? ಇದಕ್ಕೆಲ್ಲಾ ಉತ್ತರ ಮೇ 16ರ ನಂತರವೇ ದೊರೆಯಲಿದೆ. ಸುಶಿಕ್ಷಿತ ಮತ್ತು ಪ್ರಬುದ್ಧ ಮತದಾರರ ಕೈಯಲ್ಲಿ ದೇಶದ ಭವಿಷ್ಯ ಇದೆ ಎಂಬ ಮಾತಿಗೆ ಬೆಲೆ ದೊರೆಯಬಹುದೇ ಅಥವಾ ತತ್ವ ಸಿದ್ಧಾಂತಗಳನ್ನೆಲ್ಲಾ ಗಾಳಿಗೆ ತೂರಿ, 'ಅಧಿಕಾರವೇ ಪರಮ ಗುರಿ' ಎಂಬಂತಿರುವ ರಾಜಕೀಯ ಪಕ್ಷಗಳ ಮೇಲಾಟಕ್ಕೆ ಜಯ ದೊರೆಯುತ್ತದೆಯೇ ಎಂಬುದು ಕಾದು ನೋಡಬೇಕಾದ ಅಂಶ.

ಅಂತರಜಾಲ ಜಗತ್ತಿನಲ್ಲಿ ಸಕ್ರಿಯರಾಗಿರುವ ಪ್ರಬುದ್ಧ, ಸುಶಿಕ್ಷಿತ ಜನರಿಗೆ ತಮ್ಮ ನಾಯಕರು ಯಾರಾಗಬಹುದು, ಹೇಗಿರಬೇಕು ಎಂಬಿತ್ಯಾದಿ ಅಭಿಪ್ರಾಯ ಮಂಡಿಸಲು ವೆಬ್‌ದುನಿಯಾ ಇದೋ ಇಲ್ಲೊಂದು ವೇದಿಕೆ ಒದಗಿಸುತ್ತಿದೆ. ಆನ್‌ಲೈನ್‌ನಲ್ಲಿ ಜನಾಭಿಪ್ರಾಯ ಕ್ರೋಡೀಕರಿಸುವ ನಿಟ್ಟಿನಲ್ಲಿ ವೆಬ್‌ದುನಿಯಾ ಮುಂದಾಗಿದ್ದು, ಅಭಿಮಾನಿ ಓದುಗರ ಅಭಿಪ್ರಾಯ ಮಂಡನೆಗೆ ಇಲ್ಲಿ ಅವಕಾಶವಿದೆ. ಬನ್ನಿ, ನಿಮ್ಮ ಅಭಿಪ್ರಾಯವೇನು ಎಂಬುದನ್ನು ಮೌಸ್ ಕ್ಲಿಕ್ ಮಾಡುವುದರ ಮೂಲಕ ತಿಳಿಸಿ.

ನಿಮ್ಮ ಅಭಿಪ್ರಾಯ ಮಂಡನೆಗೆ ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಅಭಿಪ್ರಾಯ ಮಂಡನೆಗೆ ಮೇ 16ರವರೆಗೆ ಅವಕಾಶವಿರುತ್ತದೆ. ಅದಕ್ಕೆ ಮೊದಲು ಏಪ್ರಿಲ್ 12ರ ನಂತರ ಜನಾಭಿಪ್ರಾಯದ ಟ್ರೆಂಡ್ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

-ಸಂಪಾದಕರ