ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಚುನಾವಣಾ ಪ್ರಚಾರಕ್ಕೆ ಕೈಗೆಟುಕದ ಬಾಲಿವುಡ್ ಸ್ಟಾರ್‌ಗಳು
ಮತಸಮರ
IFM
ಮುಂಬೈ: ಬಾಲಿವುಡ್ ಸ್ಟಾರ್‌ಗಳ ಮೂಲಕ ಮುಂಬರುವ ಲೋಕಸಭಾ ಚುನಾವಣಾ ಪ್ರಚಾರ ಮಾಡಿ ಗೆಲ್ಲುವುದು ಈ ಬಾರಿ ರಾಜಕಾರಣಿಗಳ ಕೈಗೆಟುಕದ ಮಾತೇ ಸರಿ. ಸಿನಿಮಾ ರಂಗದ ಮಂದಿಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರೂ, ಹಲವು ಬಾಲಿವುಡ್ ನಟ ನಟಿಯರು ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಚಾರ ಮಾಡದಿರಲು ನಿರ್ಧರಿಸಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಹಿರಿಯ ನಟ ಶತ್ರುಘ್ನ ಸಿನ್ಹಾ ಹೇಳುವಂತೆ, ಸಿನಿಮಾ ರಂಗದಲ್ಲಿರುವ ಮಂದಿ ನಾವು ಇಷ್ಟು ದಿನ ಒಗ್ಗಟ್ಟು, ಭ್ರಾತೃತ್ವದ ಬಗ್ಗೆ ಮಾತನಾಡುತ್ತಿದ್ದೆವು. ಆದರೆ, ಈ ಬಾರಿ ನಮ್ಮವರನ್ನೇ ಚುನಾವಣಾ ಪ್ರಚಾರಕ್ಕೆ ಕರೆತರುವುದು ಕಷ್ಟಸಾಧ್ಯವಾಗಿದೆ. ಯಾಕೆಂದರೆ, ನಮ್ಮ ಸಿನಿಮಾ ಕುಟುಂಬವೇ ಈಗ ಒಡೆದುಹೋಗಿದೆ ಎಂದು ಬೇಸರದಿಂದ ನುಡಿಯುತ್ತಾರೆ.

ಸ್ಟಾರ್‌ಗಳು ಚುನಾವಣಾ ಪ್ರಚಾರಕ್ಕೆ ಒಪ್ಪದಿರುವುದು ನನ್ನ ಶ್ರಮವ್ನನು ಅಧಿಕಗೊಳಿಸಿದೆ. ಅಲ್ಲದೆ, ನನ್ನ ಕ್ಷೇತ್ರ ಪಾಟ್ನಾದಲ್ಲೇ ಜನರನ್ನು ಸೆಳೆಯಲು ಚಿತ್ರರಂಗದವರ ಮೂಲಕ ಪ್ರಚಾರ ಪಡೆಯಲು ಯೋಚಿಸಿದ್ದೆ. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ ಎಂದರು.

IFM
ಸಿನಿಮಾ ರಂಗದ ಮೂಲಗಳ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಶೂಟಿಂಗ್ ಬ್ಯುಸಿ ದಿನಗಳು ಮುಗಿದು, ರಜಾದಿನ ಕಳೆಯಲೆಂದು ಕುಟುಂಬ ಸಮೇತರಾಗಿ ಹೊರಗಡೆ ಸುತ್ತಾಡಲಿದ್ದಾರೆ. ಅದಕ್ಕಾಗಿ ಯಾವ ಸ್ಟಾರ್‌ಗಳೂ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ ಹೇಳುವಂತೆ, ಈ ಬಾರಿ ಎಪ್ರಿಲ್‌ನಲ್ಲಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತೇನೆ. ಚುನಾವಣಾ ಪ್ರಚಾರಕ್ಕೆ ಸಮಯ ಸಿಗಲಿಕ್ಕಿಲ್ಲ ಎನ್ನುತ್ತಾರೆ.

ನಟ ಗೋವಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸದಿದ್ದರೂ, ಪ್ರಚಾರಕ್ಕೆ ಸಿದ್ಧ ಎಂದಿದ್ದರು. ಆದರೆ ಈಗ ಅದೂ ಅನುಮಾನವೇ. ಯಾಕೆಂದರೆ ಅಭ್ಯರ್ಥಿಯನ್ನು ಹೊಂದಿಕೊಂಡು ಇವರ ಪ್ರಚಾರ ನಿರ್ಧಾರ ಹೊರಬೀಳುತ್ತದಂತೆ. ಇನ್ನು ನಟ ಇರ್ಫಾನ್ ಖಾನ್ ಹೇಳುವ ಪ್ರಕಾರ, ಅಭ್ಯರ್ಥಿಗಳ ಇಂಗಿತ ನನಗೆ ಅರ್ಥವಾದರೆ, ಇ,್ಟವಾದರೆ ಮಾತ್ರ ನಾನು ಪ್ರಚಾರ ಮಾಡುವೆ. ಇಲ್ಲವಾದರೆ ಸಾಧ್ಯವಿಲ್ಲ ಎನ್ನುತ್ತಾರೆ.