ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಬಿಜೆಪಿ ಸ್ವೇಚ್ಛೆಯಿಂದ ವರ್ತಿಸುತ್ತಿದೆ: ಜನಾರ್ದನ ಪೂಜಾರಿ
ಮತಸಮರ
NRB
ಅಧಿಕಾರದ ಅಮಲಿನಲ್ಲಿ ರಾಜ್ಯದಲ್ಲಿ ನಡೆಸುತ್ತಿರುವ ಕೊಳಕು ರಾಜಕೀಯ ಹಾಗೂ ಬಡವರ ವಿರೋಧಿ ಧೋರಣೆಯ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಸ್ವೇಚ್ಚೆಯಿಂದ ವರ್ತಿಸುತ್ತಿದೆ. ಆಪರೇಷನ್ ಕಮಲ ಹೆಸರಿನಲ್ಲಿ ಇತರ ಪಕ್ಷಗಳಿಂದ ಆಗಮಿಸುವವರಿಗೆ ನಿಗದಿಪಡಿಸಲಾದ ಖರೀದಿ ದರದ ಪಟ್ಟಿ ಮಾಧ್ಯಮದಲ್ಲಿ ಪ್ರಕಟವಾಗಿದ್ದು, ಈ ಕುರಿತು ಮುಖ್ಯಮಂತ್ರಿಯವರು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

ಯಾಕೆ ನಿಮ್ಮಲ್ಲಿ ಚುನಾವಣೆಗೆ ಸ್ಪರ್ಧಿಸುವ ಸಮರ್ಥ ನಾಯಕರಿಗೆ ಕೊರತೆಯೇ? ಎಂದವರು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು. ಕೈ ಕಾಲು ಕಡಿಯುವ ಮಾತು ಯಾರು ಹೇಳಿದರು ಸರಿಯಲ್ಲ. ಈ ಪ್ರತಿಕ್ರಿಯೆಗಳನ್ನು ಜನ ಮೆಚ್ಚುವುದಿಲ್ಲ ಎಂದು ಅವರು ಹೇಳಿದರು. ಚುನಾವಣಾ ನೀತಿ ಪಾಲನೆಗೆ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡಬೇಕೆಂದರು.