ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸಕ್ಕೆ ಬಿಜೆಪಿಯು ನೇರಕಾರಣವಾದರೆ, ಈ ರಾಷ್ಟ್ರೀಯ ಅವಮಾನಕಾರಿ ಘಟನೆಯನ್ನು ತಡೆಯುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ತನ್ನ ಕರ್ತವ್ಯ ವೈಫಲ್ಯ ಮೆರೆದಿದೆ ಎಂದು ಸಿಪಿಐ-ಎಂ ಪಾಲಿಟ್‌ಬ್ಯೂರೋ ಸದಸ್ಯ ಸೀತಾರಾಮ ಯೆಚೂರಿ ಹೇಳಿದ್ದಾರೆ.
ಬಿಜೆಪಿಯು ಕೊಲೆಗಾರನ ಪಾತ್ರವಹಿಸಿದ್ದರೆ, ಪೊಲೀಸ್ ಕ್ಯಾಪ್ಟನ್‌ನೆಂತೆ ಬಾಬ್ರಿ ಮಸೀದಿಯನ್ನು ಸಂರಕ್ಷಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಯಚೂರಿ ಇಲ್ಲಿನ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
ಮಸೀದಿಯನ್ನು ರಕ್ಷಿಸಲು ಸಾಧ್ಯಇರುವ ಎಲ್ಲಾ ಕ್ರಮಗಳನ್ನು ಕಾಂಗ್ರೆಸ್ ಕೈಗೊಳ್ಳಬಹುದಿತ್ತು, ಅದರ ಬದಲಿಗೆ, ರಾಷ್ಟ್ರೀಯ ನಾಚಿಕೆಗೇಡಿನ ಕಾರ್ಯ ಕೈಗೊಂಡವರ ವಿರುದ್ಧ ದಯೆ ತೋರುತ್ತಿದೆ ಎಂದು ಅವರು ಹೇಳಿದರು.
ಬಾಬ್ರಿ ಮಸೀದಿ ಧ್ವಂಸಕ್ಕೆ ಕಾಂಗ್ರೆಸ್ ಸಹ ಸಮಾನವಾಗಿ ಕಾರಣವೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯೆಚೂರಿ, ಮಸೀದಿ ಕಾಪಾಡುವಲ್ಲಿ ಕಾಂಗ್ರೆಸ್ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು.