ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಸಿಂಗ್ ಪ್ರಧಾನಿಯಾಗಿ ಕರುಣಾ ಬೆಂಬಲ
ಮತಸಮರ
ದ್ವಿತೀಯ ಅವಧಿಗೂ ಮನಮೋಹನ್ ಸಿಂಗ್ ಅವರೇ ಪ್ರಧಾನಿಯಾಗಲು ಬೆಂಬಲ ಸೂಚಿಸಿರುವ ತಮಿಳ್ನಾಡು ಮುಖ್ಯಮಂತ್ರಿ ಎಂ.ಕೆ.ಕರುಣಾನಿಧಿ ಅವರು ಈ ಉನ್ನತ ಹುದ್ದೆಗೆ ಇತರರನ್ನು ಬೆಂಬಲಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

"ಮನಮೋಹನ್ ಸಿಂಗ್ ಅವರನ್ನು ಹೊರತುಪಡಿಸಿದರೆ ಇನ್ಯಾರೇ ಆದರೂ ಪ್ರಧಾನಿಯಾಗಲು ಸಾಧ್ಯವಿಲ್ಲ" ಎಂದು ಕರುಣಾನಿಧಿ ಹೇಳಿದ್ದಾರೆ. ಕರುಣಾನಿಧಿ ಅವರ ಡಿಎಂಕೆ ಪಕ್ಷವು ಯುಪಿಎಯ ಪ್ರಧಾನ ಅಂಗಪಕ್ಷವಾಗಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು ಡಿಎಂಕೆಯ ಪ್ರಧಾನ ಮಂಡಳಿಯು ಮುಂದಿನ ಸರ್ಕಾರದಲ್ಲಿ ಪಾಲ್ಗೊಳ್ಳುವ ಕುರಿತು ನಿರ್ಧರಿಸಲಿದೆ ಎಂದು ತಿಳಿಸಿದರು.

ಶ್ರೀಲಂಕಾ ತಮಿಳರ ಪರಿಸ್ಥಿತಿಗಾಗಿ ಬಲಿದಾನಕ್ಕೆ ಸಿದ್ಧ ಎಂಬ ಘೋಷಣೆಯೊಂದಿಗೆ ಸೋಮವಾರ ಮಿಂಚಿನ ಉಪವಾಸ ಸತ್ಯಾಗ್ರಹ ನಡೆಸಿ, ಬಳಿಕ ಶ್ರೀಲಂಕಾ ಸೇನೆಯು ತನ್ನ ವಿಧ್ವಂಸಕ ಯುದ್ಧವನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಉಪವಾಸದಿಂದ ಹಿಂತೆಗೆದುಕೊಂಡಿರುವ ಕರುಣಾನಿಧಿ ಶ್ರೀಲಂಕಾದ ತಮಿಳರ ಸಮಸ್ಯೆಯು ರಾಜ್ಯದಲ್ಲಿ ಚುನಾವಣಾ ವಿಚಾರವಲ್ಲ ಎಂದಿದ್ದಾರೆ.

ಪ್ರತ್ಯೇಕ ತಮಿಳು ರಾಜ್ಯವು ಸಮಸ್ಯೆಗೆ ಪರಿಹಾರ ಎಂದಿರುವ ಜಯಲಲಿತಾ ಕ್ರಮವನ್ನು ಖಂಡಿಸಿರುವ ಕರುಣಾನಿಧಿ, ಅವರು ಚುನಾವಣಾ ಲಾಭಕ್ಕಾಗಿ ಈ ವಿಚಾರವನ್ನು ಎತ್ತುತ್ತಿದ್ದಾರೆ ಎಂದು ಟೀಕಿಸಿದರು.

ತಮಿಳು ದೇಶದ ಈ ಪರಿಕಲ್ಪನೆಯನ್ನು ವಿರೋಧಿಸುತ್ತಿದ್ದವರೆಲ್ಲ ಈ ವೋಟಿನ ಮೇಲೆ ಕಣ್ಣಿಟ್ಟು ಅದರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಶ್ರೀಲಂಕಾದಲ್ಲಿ ತಮಿಳು ಈಳಂ ತಮಿಳ್ನಾಡು ಚುನಾವಣೆಗಳ ಮೇಲೆ ಪರಿಣಾಮ ಬೀರದು ಎಂದು ಹೇಳಿದರು.