ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಕಣಕ್ಕಿಳಿದವರಲ್ಲಿ 909 ಕ್ರಿಮಿನಲ್‌ಗಳು, 862 ಕರೋಡ್‌ಪತಿಗಳು
ಮತಸಮರ
ಪ್ರಥಮ ಮೂರು ಹಂತದ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಹಾಗಾಗಿ ರಾಜಕೀಯ ಅಪರಾಧಿಕರಣವನ್ನು ತಡೆಯುವ ಪ್ರಯತ್ನ ಒಂದು ತಮಾಷೆ ಎಂಬಂತೆ ಭಾಸವಾಗಿದೆ.

ಹದಿನೈದನೇ ಲೋಕಸಭಾ ಚುನಾವಣೆಗಾಗಿ ಕಣಕ್ಕಿಳಿದಿರುವ ಒಟ್ಟು 5,573ಗಳಲ್ಲಿ ಈ ಕ್ರಿಮಿನಲ್‌ಗಳ ಶೇಕಡಾವಾರು 16.3.

ಇವರಲ್ಲಿ ಕಾಂಗ್ರೆಸ್ ಅಗ್ರಸ್ಥಾನದಲ್ಲಿದೆ. ಕಾಂಗ್ರೆಸ್‌ನ 100 ಅಭ್ಯರ್ಥಿಗಳದ್ದು ಅಪರಾಧಿ ಹಿನ್ನೆಲೆ. ಕಾಂಗ್ರೆಸ್‌ಗೆ ಇಲ್ಲಿಯೂ ಕತ್ತುಕತ್ತಿನ ಸ್ಫರ್ಧೆ ನೀಡಿರುವುದು ಬಿಜೆಪಿ. ಬಿಜೆಪಿಯ 98, ಬಿಎಸ್ಪಿಯ 88, ಎಸ್ಪಿಯಿಂದ 39 ಅಭ್ಯರ್ಥಿಗಳು ಕ್ರಿಮಿನಲ್ ದಾಖಲೆ ಹೊಂದಿದ್ದಾರೆ.

ಇವರಲ್ಲಿ 401 ಅಭ್ಯರ್ಥಿಗಳು ಹೇಯಕೃತ್ಯ ಎಸಗಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಅವರಲ್ಲಿ ಕಾಂಗ್ರೆಸ್ ಪಾಲು 36, ಬಿಜೆಪಿ 35, ಬಿಎಸ್ಪಿ 32, ಮತ್ತು ಎಸ್ಪಿಗೆ ಸೇರಿದ ಅಭ್ಯರ್ಥಿಗಳ ಸಂಖ್ಯೆ 25. ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮಸ್ಸ್(ಎಡಿಆರ್) ಮತ್ತು ನ್ಯಾಶನಲ್ ಇಲೆಕ್ಷನ್ ವಾಚ್ ಸಂಘಟನೆಗಳು ಅಭ್ಯರ್ಥಿಗಳು ಸಲ್ಲಿಸಿರುವ ಅಫಿದಾವಿತ್ ಆಧಾರದಿಂದ ಸಂಗ್ರಹಿಸಲಾಗಿದೆ.

ಬಿಹಾರದಿಂದ ಗರಿಷ್ಠ ಸಂಖ್ಯೆಯ ಕ್ರಿಮಿನಲ್‌ಗಳು ಕಣಕ್ಕಿಳಿದಿದ್ದಾರೆ. ಬಿಹಾರದ ಅಭ್ಯರ್ಥಿಗಳ ಸಂಖ್ಯೆ 175 ಅಂದರೆ ಶೇ.27.13. ದ್ವಿತೀಯ ಸ್ಥಾನ ಮಹಾರಾಷ್ಟ್ರಕ್ಕೆ ಸಲ್ಲುತ್ತದೆ. ಇಲ್ಲಿಂದ ಕಣಕ್ಕಿಳಿದಿರುವ 144(ಶೇ.17.84) ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿರುವವರು. ಉತ್ತರ ಪ್ರದೇಶದ ಸಂಖ್ಯೆ 122(ಶೇ.17.30) ಜಾರ್ಖಂಡ್‌ನಿಂದ ಸ್ಫರ್ಧಿಸುತ್ತಿರುವ 51 ಮಂದಿಯಲ್ಲಿ 30 ಮಂದಿ ಕ್ರಿಮಿನಲ್‌ಗಳು.

ಇವರು ಕೋಟ್ಯಾಧಿಪತಿಗಳು
ಇದೇ ವೇಳೆ ಗುರುವಾರ ನಡೆಯುವ ತೃತೀಯ ಹಂತವೂ ಸೇರಿದಂತೆ ಇದುವರೆಗೆ ಕಣಕ್ಕಿಳಿದಿರುವವರಲ್ಲಿ 862(ಶೇ.15.5) ಮಂದಿ ಕೋಟ್ಯಾಧಿಪತಿಗಳು. ಕಾಂಗ್ರೆಸ್‌ನಿಂದ 202, ಬಿಜೆಪಿಯಿಂದ 139, ಬಿಎಸ್ಪಿಯಿಂದ 95, ಎಸ್ಪಿಯಿಂದ 41 ಕೋಟಿಪತಿಗಳು ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಕಳೆದ ಚುನಾವಣೆಗಿಂತ ಈ ಸರ್ತಿ ಕೋಟ್ಯಾಧಿಪತಿಗಳ ಕಾರ್ಬಾರು ಸಾಕಷ್ಟು ಏರಿದ್ದು, 2004ರಲ್ಲಿ ಶೇ.9ರಷ್ಟು ಇದ್ದದ್ದು, 2009ರ ವೇಳೆಗೆ ಶೇ.15.5 ಆಗಿದೆ.

ಮಹಾರಾಷ್ಟ್ರದ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಸಿರಿವಂತರು. ಇಲ್ಲಿ 139 ಕೋಟ್ಯಾಧಿಪತಿ ಅಭ್ಯರ್ಥಿಗಳಿದ್ದರೆ, ಉತ್ತರ ಪ್ರದೇಶದಿಂದ 118 ಹಾಗೂ ಆಂಧ್ರಪ್ರದೇಶದಿಂದ 117 ಕೋಟ್ಯಾಧಿಪತಿಗಳು ಕಣಕ್ಕಿಳಿದಿದ್ದಾರೆ. ಅಭ್ಯರ್ಥಿಗಳ ಪಕ್ಷವಾರು ಸರಾಸರಿ ಆದಾಯ ಇಂತಿದೆ. ಜನತಾದಳ(ಎಸ್) ಹಾಗೂ ಟಿಡಿಪಿ ಅಭ್ಯರ್ಥಿಗಳ ಒಟ್ಟು ಸರಾಸರಿ 12 ಕೋಟಿ, ಎನ್ಸಿಪಿ 5ಕೋಟಿ, ಕಾಂಗ್ರೆಸ್ 4.7 ಕೋಟಿ, ಬಿಎಸ್ಪಿ 3 ಕೋಟಿ ಹಾಗೂ ಎಸ್ಪಿ 2 ಕೋಟಿ.

ಚುನಾವಣಾ ಕಣಕ್ಕಿಳಿದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 61.5ರಷ್ಟು ಮಂದಿ ತಮ್ಮ ಪಾನ್ ಕಾರ್ಡ್ ವಿವರವನ್ನೇ ನೀಡಿಲ್ಲ.