ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಚುನಾವಣೆ: 3ನೆ ಹಂತದ ಮತದಾನ ಆರಂಭ
ಮತಸಮರ
ಹದಿನೈದನೆ ಲೋಕಸಭಾ ಚುನಾವಣೆಯ ಮ‌ೂರನೆ ಹಂತದ ಮತದಾನ ಆರಂಭಗೊಂಡಿದ್ದು ಆರಂಭದಲ್ಲಿ ಮಂದಗತಿಯ ಮತದಾನ ವರದಿಯಾಗಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳು ಮತ್ತು ಎರಡು ಕೇಂದ್ರೀಯ ಪ್ರದೇಶಗಳಲ್ಲಿ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಇದು ಎರಡನೆಯ ಹಾಗೂ ಕೊನೆಯ ಹಂತದ ಮತದಾನವಾಗಿದೆ.

ರಾಜ್ಯದ 11 ಕ್ಷೇತ್ರಗಳು ಸೇರಿದಂತೆ ಒಟ್ಟು 107 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 101 ಮಹಿಳೆಯರು ಸೇರಿದಂತೆ 1,567 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಮುಖ್ಯಮಂತ್ರಿ ಪುತ್ರ ರಾಘವೇಂದ್ರ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ, ಜೆಡಿಯು ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ಯುವ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ, ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರುಗಳ ಹಣೆಬರಹ ನಿರ್ಧಾರವಾಗಲಿದೆ.

ತೃತೀಯ ಹಂತದಲ್ಲಿ 14 ಕೋಟಿ ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ರಾಷ್ಟ್ರಾದ್ಯಂತ 1.65 ಲಕ್ಷ ಮತಗಟ್ಟೆಗಳಿವೆ ಇವುಗಳಲ್ಲಿ 15 ಸಾವಿರ ಮತಗಟ್ಟೆಗಳನ್ನು ನಕ್ಸಲ್ ಪೀಡಿತ ಎಂದು ಪರಿಗಣಿಸಲಾಗಿದೆ. ಇಂದಿನ ಚುನಾವಣೆಯಲ್ಲಿ 135 ಪಕ್ಷಗಳ ವಿವಿಧ ಅಭ್ಯರ್ಥಿಗಳು ಸ್ಫರ್ಧಿಸುತ್ತಿದ್ದರೆ, 752 ಅಭ್ಯರ್ಥಿಗಳು ಸ್ವತಂತ್ರವಾಗಿ ಅದೃಷ್ಟಪರೀಕ್ಷೆಗೆ ಹೊರಟಿದ್ದಾರೆ.

ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವರು ತಮ್ಮ ಕುಟುಂಬದೊಂದಿಗೆ ಮತಚಲಾಯಿಸಿದರು. ಮಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ. ರವಿ, ಮುಂಬೈಯಲ್ಲಿ ಅನಿಲ್ ಅಂಬಾನಿ, ಕೊಡಗಿನಲ್ಲಿ ಅಭ್ಯರ್ಥಿ ಜೀವಿಜಯ ಸೇರಿದಂತೆ ಅನೇಕ ಗಣ್ಯರು ಇದೀಗಾಲೇ ಮತ ಚಲಾಯಿಸಿದರು.