ರಾಜ್ಯದ 11ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಹಾಸನದ ಹೊಳೆನರಸಿಪುರದಲ್ಲಿ ಜೆಡಿಎಸ್ ನಕಲಿ ಮತದಾನ ನಡೆಸುತ್ತಿರುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಂ ಗಂಭೀರವಾಗಿ ಆರೋಪಿಸಿ, ಮರು ಮತದಾನಕ್ಕೆ ಆಗ್ರಹಿಸಿದ್ದಾರೆ.
ಮಾಜಿ ದೇವೇಗೌಡರು ಸ್ಪರ್ಧಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಆದರೆ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಹೊಳೆನರಸಿಪುರ ಪ್ರದೇಶದಲ್ಲಿ ಭಾವಚಿತ್ರ ಇಲ್ಲದ ಪಡಿತರ ಚೀಟಿ ಉಪಯೋಗಿಸಿ ಜೆಡಿಎಸ್ ಬೋಗಸ್ ಮತದಾನದಲ್ಲಿ ತೊಡಗಿದೆ, ಈವರೆಗೆ ನಡೆದಿರುವ ಶೇ.50ರಷ್ಟು ಮತದಾನ ನಕಲಿ ಎಂದು ಅವರು ದೂರಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮೌಖಿಕವಾಗಿ ತಿಳಿಸಿರುವುದಾಗಿ ಹೇಳಿರುವ ಶಿವರಾಂ, ಚುನಾವಣಾ ಆಯೋಗ ಮರುಮತದಾನ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ 2ನೇ ಹಾಗೂ ಅಂತಿಮ ಹಂತದ ಮತದಾನದಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ. ಹಲವೆಡೆ ಮತದಾನಕ್ಕೆ ಬಹಿಷ್ಕಾರ ಹಾಕಿದ ಘಟನೆಯೂ ನಡೆದಿದೆ.
ಮಧ್ನಾಹ್ನ 11ಗಂಟೆಯವರೆಗೆ ದಾಖಲಾದ ಮತದಾನ ವಿವರ: ಒಟ್ಟು ಶೇ.18.7