ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಮಹಾತ್ಮಗಾಂಧಿ-ಬೋಸ್‌ಗೂ ನೀತಿ ಸಂಹಿತೆ ಬಿಸಿ!
ಮತಸಮರ
NRB
ಊಟೋಪಚಾರ, ಅರ್ಚಕರು ಹೀಗೆ ಪ್ರತಿಯೊಂದಕ್ಕೂ ಚುನಾವಣಾ ನೀತಿ ಸಂಹಿತೆಯಿಂದ ರಾಜಕೀಯ ಪಕ್ಷಗಳು ಕಿರಿಕಿರಿಗೆ ಒಳಗಾಗಿರುವ ವಿಷಯ ಸಾಮಾನ್ಯ, ಆದರೆ ಇದೀಗ ಮಹಾತ್ಮಗಾಂಧಿ, ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಭಾವಚಿತ್ರಕ್ಕೂ ನೀತಿ ಸಂಹಿತೆಯ ಬಿಸಿತಟ್ಟಿರುವ ಅಂಶ ಬಾಗಲಕೋಟೆಯಲ್ಲಿ ನಡೆದಿದೆ.

ರಾಜ್ಯದಲ್ಲಿ ಗುರುವಾರ 2ನೇ ಹಾಗೂ ಅಂತಿಮ ಹಂತದ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಬಾಗಲಕೋಟೆ ನವನಗರ ಶಾಲೆಯೊಂದರ ಮತಗಟ್ಟೆಯ ಗೋಡೆಯ ಮೇಲೆ ತೂಗು ಹಾಕಿರುವ ರಾಷ್ಟ್ರಪಿತ ಮಹಾತ್ಮಗಾಂಧಿ, ನೇತಾಜಿ ಸುಭಾಶ್ಚಂದ್ರ ಬೋಸ್ ಸೇರಿದಂತೆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಪೇಪರ್‌ನಿಂದ ಮುಚ್ಚಿರುವ ಅಂಶ ಬಯಲಾಗಿದ್ದು, ಗಾಂಧಿ, ಬೋಸ್ ಕೂಡ ಒಂದು ಪಕ್ಷದ ವಕ್ತಾರರೇ? ಅವರ ಭಾವಚಿತ್ರವನ್ನು ಪೇಪರ್‌ನಿಂದ ಮುಚ್ಚುವ ಅಗತ್ಯ ಇತ್ತೇ?ಎಂಬುದಾಗಿ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಾಂಧಿ, ಬೋಸ್, ಪಟೇಲ್, ಶಾಸ್ತ್ರಿ ಸೇರಿದಂತೆ ಹಲವು ನಾಯಕರ ಭಾವಚಿತ್ರವನ್ನು ಪೇಪರ್‌ನಿಂದ ಮುಚ್ಚಿರುವುದು ಯಾಕೆ ಎಂಬ ಪ್ರಶ್ನೆಗೆ ಮತಗಟ್ಟೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾರಿಕೆಯ ಉತ್ತರ ನೀಡಿದ್ದಾರೆ. ಚುನಾವಣಾ ಆಯೋಗದಿಂದ ಬಂದ ಆದೇಶದ ಮೇರೆಗೆ ರೆವಿನ್ಯೂ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಎಂಬ ಸಮಜಾಯಿಷಿಕೆ ಅಧಿಕಾರಿಗಳದ್ದು.

ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಪೇಪರ್‌ನಿಂದ ಮುಚ್ಚುವ ಮೂಲಕ ಜಿಲ್ಲಾಡಳಿತ ಅಪಮಾನ ಮಾಡಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಗಾಂಧಿ, ಬೋಸ್‌ಗೂ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿದಂತಾಗಿದೆ!