ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ನೆಲಬಾಂಬು ಸ್ಫೋಟಿಸಿರುವ ಕಾರಣ ಇಬ್ಬರು ಗಡಿಭದ್ರತಾ ಪಡೆಯ ಇಬ್ಬರು ಜವಾನರು ಗಾಯಗೊಂಡಿದ್ದಾರೆ. ರಾಜ್ಯದ 14 ಲೋಕಸಭಾ ಸ್ಥಾನಗಳಿಗೆ ತೃತೀಯ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ತನಕ ಶೇ.30ರಷ್ಟು ಮತದಾನವಾಗಿದೆ.
ಈ ಘಟನೆ ಹೊರತುಪಡಿಸಿದರೆ ಹೆಚ್ಚೂಕಮ್ಮಿ ಮತದಾನವು ಶಾಂತಿಯುತವಾಗಿತ್ತು ಎಂಬುದಾಗಿ ಗೃಹಕಾರ್ಯದರ್ಶಿ ಅರ್ಧೇಂದು ಸೇನ್ ವರದಿಗಾರರಿಗೆ ತಿಳಿಸಿದ್ದಾರೆ.
ಪುರುಲಿಯಾ ಜಿಲ್ಲೆಯ ಬಲರಾಮಪುರ ಬ್ಲಾಕಿನಲ್ಲಿ ನೆಲ ಬಾಂಬ್ ಸ್ಫೋಟಗೊಂಡಿರುವ ಕಾರಣ ಇಬ್ಬರು ಗಾಯಗೊಂಡಿದ್ದಾರೆ ಎಂದು ಮುಖ್ಯಕಾರ್ಯದರ್ಶಿಗಳು ತಿಳಿಸಿದ್ದಾರೆ.