ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಗೆ ಸ್ಫರ್ಧೆ ಇಲ್ಲ
ಮತಸಮರ
ಎಲ್.ಕೆ. ಆಡ್ವಾಣಿ ಅವರೇ ಪ್ರಶ್ನಾತೀತ ಪ್ರಧಾನಿ ಅಭ್ಯರ್ಥಿಯಾಗಿದ್ದು, ನಮ್ಮ ಪಕ್ಷದಲ್ಲಿ ಪ್ರಧಾನಿ ಹುದ್ದೆಗೆ ಸ್ಫರ್ಧೆ ಇಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ಬಿಜೆಪಿಯಲ್ಲಿ ಸ್ಫರ್ಧೆ ಇಲ್ಲ. ಆಡ್ವಾಣಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ರಾಜ್‌ನಾಥ್ ಸಿಂಗ್ ಸ್ಪಷ್ಟಪಡಿಸಿದರು. ನೀವುಪ್ರಧಾನಿ ಹುದ್ದೆಯ ಸ್ಫರ್ಧೆಯಲ್ಲಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಈ ಮೇಲಿನಂತೆ ಉತ್ತರಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕರುಗಳಾದ ಅರುಣ್ ಶೌರಿ, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಅವರುಗಳು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟಕ್ಕೇರಲು ಅರ್ಹತೆ ಹೊಂದಿದ್ದಾರೆ ಎಂಬ ಹೇಳಿಕೆ ನೀಡಿರುವ ಬೆನ್ನಿಗೆ ರಾಜ್‌ನಾಥ್ ಸಿಂಗ್ ಅವರ ಸ್ಪಷ್ಟನೆ ಹೊರಬಿದ್ದಿದೆ. ಆದರೆ ಪ್ರಸಕ್ತ ಚುನಾವಣೆಯಲ್ಲಿ ಆಡ್ವಾಣಿ ಅವರೇ ಪ್ರಧಾನಿ ಅಭ್ಯರ್ಥಿ ಎಂಬ ವಾಕ್ಯವನ್ನು ಸೇರಿಸಲೂ ಮೇಲಿನ ತ್ರಿಮೂರ್ತಿ ನಾಯಕರು ಮರೆತಿರಲಿಲ್ಲ.

ಒಂದೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದರೆ ತಾನು ಸಚಿವ ಸಂಪುಟಕ್ಕೆ ಸೇರಲಾರೆ ಬದಲಿಗೆ ಪಕ್ಷದ ಕಾರ್ಯ ನಿರ್ವಹಿಸುವುದಾಗಿ ನುಡಿದರು. ಪಕ್ಷಾಧ್ಯಕ್ಷರಾಗಿ ಅವರ ಅಧಿಕಾರಾವಧಿ 2010ರ ಜನವರಿಗೆ ಅಂತ್ಯಗೊಳ್ಳಲಿದೆ.

ಬಿಜೆಪಿಯು ಟಿಜಿಪಿ, ಟಿಆರ್ಎಸ್ ಹಾಗೂ ಇತರರ ಬೆಂಬಲ ಯಾಚಿಸಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಂಗ್, "ಎನ್‌ಡಿಎ ಮೈತ್ರಿಕೂಟವು ಬಹುಮತ ಪಡೆಯುವ ಕುರಿತು ತನಗೆ ವಿಶ್ವಾಸವಿದೆ. ಮತ್ತು ಯಾವುದೇ ವಿಚಾರವಿದ್ದರೂ ನಮ್ಮ ವ್ಯೂಹವನ್ನು ತಾವ್ಯಾಕೆ ಬಹಿರಂಗ ಪಡಿಸಬೇಕು" ಎಂದು ಅವರು ಮರುಪ್ರಶ್ನಿಸಿದರು.