ಕಾಂಗ್ರೆಸ್ ಅಧಿಕಾರ ಹಿಡಿಯದಿದ್ದಲ್ಲಿ ಸ್ವರ್ಗ ಉರುಳದು: ದಿಗ್ವಿಜಯ್ ಸಿಂಗ್
ನವದೆಹಲಿ, ಭಾನುವಾರ, 3 ಮೇ 2009( 13:02 IST )
ಒಂದೊಮ್ಮೆ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಅಧಿಕಾರ ಹಿಡಿಯದೇ ಹೋದರೆ ಸ್ವರ್ಗವೇನೂ ಉರುಳದು, ಮತ್ತು ವಿರೋಧಿ ಸ್ಥಾನದಲ್ಲಿ ಕುಳಿತುಕೊಳ್ಳುವ ಆಯ್ಕೆಯು ಯಾವುದೇ ರಾಜಕೀಯ ಪಕ್ಷಕ್ಕೆ ಯಾವಾಗಲೂ ಮುಕ್ತವಾಗಿರುತ್ತದೆ ಎಂಬುದಾಗಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಸಿಎನ್ಎನ್-ಐಬಿಎನ್‌ನ ಡೆವಿಲ್ ಅಡ್ವೊಕೇಟ್ ಕಾರ್ಯಕ್ರಮದಲ್ಲಿ ಕರಣ್ ಥಾಪರ್ ಅವರೊಂದಿಗೆ ಮಾತನಾಡುತ್ತಿದ್ದ ಸಿಂಗ್ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಆಗಿರುವ ಸಿಂಗ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ ಎಣಿಕೆಯ ಬಳಿಕ ಕಾಂಗ್ರೆಸ್ 150 ಸ್ಥಾನಗಳನ್ನು ಗಳಿಸಲು ವಿಫಲಾವಾಗಿದ್ದರೆ, ಅಥವಾ ಯುಪಿಎಯು 200 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಲು ಸಫವಾಗದಿದ್ದರೆ, ನಿಮ್ಮ ಪಕ್ಷವು ಹೊಸ ಮೈತ್ರಿಗೆ ಮುಂದಾಗುವುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಅಧಿಕಾರ ಹಿಡಿಯದಿದ್ದರೆ, ಸ್ವರ್ಗವೇನೂ ಉರುಳಿ ಬೀಳದು ಎಂದಿದ್ದಾರೆ.
ವಿರೋಧಿ ಸ್ಥಾನದಲ್ಲಿ ಕುಳಿತುಕೊಳ್ಳುವುದೂ ಕಾಂಗ್ರೆಸ್‍ನ ಒಂದು ಆಯ್ಕೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು 'ಖಂಡಿತವಾಗಿಯೂ ಹೌದು' ಎಂದು ನುಡಿದರು. ಅಲ್ಲದೆ ಯೂವುದೇ ರಾಜಕೀಯ ಪಕ್ಷಕ್ಕೆ ವಿರೋಧಿ ಸ್ಥಾನದಲ್ಲಿ ಕುಳಿತುಕೊಳ್ಳುವ ಆಯ್ಕೆಯು ಯಾವತ್ತೂ ಮುಕ್ತವಾಗಿರುತ್ತದೆ, ನಾವು ಸರ್ಕಾರ ರಚಿಸದೇ ಹೋದರೆ ಧರೆಯೇನೂ ಉರುಳದು ಎಂದವರು ನುಡಿದರು.
ಅಲ್ಲದೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಎಂಬ ಕುರಿತು ಅವರು ತಮ್ಮ ಸಹಮತ ವ್ಯಕ್ತಪಡಿಸಿದರು.