ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಪ್ರಧಾನಿಯಾಗೋ ಕರ್ತವ್ಯವಿದೆ, ಮಹಾತ್ವಾಕಾಂಕ್ಷೆಯಲ್ಲ: ಮೋದಿ
ಮತಸಮರ
ನರೇಂದ್ರ ಮೋದಿ ಅವರು ಮುಂದಿನ ಪ್ರಧಾನಿ ಅಭ್ಯರ್ಥಿಯೇ ಎಂಬ ಕುರಿತು ಊಹೆಗಳು ದಟ್ಟವಾಗುತ್ತಿರುವಂತೆ, "ನನಗೆ ಕರ್ತವ್ಯವಿದೆ ಆದರೆ ಮಹತ್ವಾಕಾಂಕ್ಷೆಯಲ್ಲ" ಎಂಬ ಮಾತುಗಳು ಅವರ ಬಾಯಿಯಿಂದ ಹೊರಬಿದ್ದಿದೆ. ಮೋದಿ ಅವರೊಬ್ಬ ಭವಿಷ್ಯದ ಪ್ರಧಾನಿ ಎಂಬುದಾಗಿ ಬಿಜೆಪಿ ಪಕ್ಷದೊಳಗಿನ ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದನ್ನು ಎಲ್.ಕೆ. ಆಡ್ವಾಣಿಯವರ ವಿಶ್ವಾಸದ ಕೊರತೆ ಎಂಬುದಾಗಿ ವಿರೋಧಿಗಳು ಬಣ್ಣಿಸಿದ್ದಾರೆ. ಆದರೆ ಆಡ್ವಾಣಿ ಅವರೇ ಮುಂದಿನ ಪ್ರಧಾನಿ ಎಂದು ಮೋದಿ ಹೇಳಿದ್ದಾರೆ.

ಸಂದರ್ಶನ ಒಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು "ಹೆಚ್ಚಿನವರು ಮಹತ್ವಾಕಾಂಕ್ಷೆಯ ಪ್ರಚೋದನೆ ಹೊಂದಿರುತ್ತಾರೆ. ಆದರೆ, ನಾನು ಕರ್ತವ್ಯದ ಅಂತಸ್ಸತ್ವವನ್ನು ಹೊಂದಿದ್ದೇನೆ. ತಾನಿದನ್ನು ಬಾಲ್ಯದಲ್ಲೇ ಕಲಿತಿದ್ದೇನೆ ಮತ್ತು ಅನುಸರಿಸುತ್ತಿದ್ದೇನೆ. 'ಕೊಡು', 'ತಕೋ', 'ಆಗು' ಎಂಬುದೆಲ್ಲ ನನ್ನ ಕಾರ್ಯವಿಧಾನವಲ್ಲ. ನಾನು ಕಾರ್ಯಗಳನ್ನು ಮಾಡಲಿಚ್ಛಿಸುತ್ತೇನೆ ಮತ್ತು ಎಲ್ಲಾ ಜವಾಬ್ದಾರಿಗಳನ್ನು ಪೂರೈಸುತ್ತೇನೆ. ನಾನು ಮುಖ್ಯಮಂತ್ರಿಯಾಗದೇ ಒಬ್ಬ ಮುನಿಸಿಪಲ್ ಕಮಿಷನರ್ ಆಗಿರುತ್ತಿದ್ದರೂ, ನಾನು ನನ್ನ ಕರ್ತವ್ಯಗಳನ್ನು ಸಂಪೂರ್ಣ ಶ್ರದ್ಧೆಯಿಂದಲೇ ಮಾಡುತ್ತಿದ್ದೆ" ಎಂದು ಹೇಳಿದ್ದಾರೆ.

"ಆಡ್ವಾಣಿ ಅವರ ನಾಯಕತ್ವದಲ್ಲಿ ಬಿಜೆಪಿಯು ಸ್ಪಷ್ಟಬಹುಮತ ಹೊಂದಲಿದೆ. ಮೈತ್ರಿಯ ಪ್ರಶ್ನೆ ಉದ್ಭವಿಸುವುದಿಲ್ಲ. ಬಿಜೆಪಿಯ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಏಕ ಸದಸ್ಯ ಪಕ್ಷವೂ ಪ್ರಾಮುಖ್ಯವೇ. ಬಿಜೆಪಿಯು 2/3 ಬಹುಮತ ಗಳಿಸಿದರೂ ಸಹ, ಇಂತವರನ್ನು ಜತೆಗೊಯ್ಯಲಾಗುವುದು ಮತ್ತು ಪ್ರಾಂತೀಯ ಆಕಾಂಕ್ಷಿಗಳನ್ನು ಗೌರವಿಸಲಾಗುವುದು" ಎಂದು ಅವರು ಚುನಾವಣೋತ್ತರ ಮೈತ್ರಿಯ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಗುಜರಾತ್ ಮಾತ್ರವಲ್ಲ ಭಾರತದ ಎಲ್ಲೆಡೆ ಜನತೆಗೆ ಅಭಿವೃದ್ಧಿ ಬೇಕಾಗಿದೆ ಮತ್ತು ಅವರು ಮತಬ್ಯಾಂಕ್ ರಾಜಕೀಯದಿಂದ ರೋಸಿಹೋಗಿದ್ದಾರೆ ಎಂದು ಅವರು ಸದ್ಯದ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.