ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಕಾಯ್ದೆ ಉಲ್ಲಂಘನೆ: ದೇವೇಗೌಡ-ರೇವಣ್ಣಗೆ ನೋಟಿಸ್
ಮತಸಮರ
ಎರಡನೇ ಹಾಗೂ ಅಂತಿಮ ಹಂತದ ಲೋಕಸಭಾ ಚುನಾವಣೆಯಲ್ಲಿ ಗುಪ್ತ ಮತದಾನ ನೀತಿಯನ್ನು ಉಲ್ಲಂಘಿಸಿದ ಆರೋಪದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಪುತ್ರ ಎಚ್.ಡಿ.ರೇವಣ್ಣ ಇದೀಗ ಕಾನೂನಿನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮತಗಟ್ಟೆಯಲ್ಲಿ ಗುಪ್ತಮತದಾನ ನೀತಿಯನ್ನು ಉಲ್ಲಂಘಿಸಿರುವ ಆರೋಪದ ಮೇರೆಗೆ ದೇವೇಗೌಡ ಹಾಗೂ ರೇವಣ್ಣ ವಿರುದ್ಧ ನೋಟಿಸ್ ಜಾರಿಗೊಳಿಸುವಂತೆ ಹಾಸನದ ಸಹಾಯಕ ಕಮೀಷನರ್ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನವೀನ್ ರಾಜ್ ಸಿಂಗ್ ಅವರು, ಸಹಾಯಕ ಚುನಾವಣಾಧಿಕಾರಿ ಕರಿಗೌಡ ಅವರಿಗೆ ನಿರ್ದೇಶನ ನೀಡಿದ್ದಾರೆ.

ಮೇ 30ರಂದು ನಡೆದ ಎರಡನೇ ಹಂತದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇವೇಗೌಡರು ತಮ್ಮ ಪತ್ನಿ ಚನ್ನಮ್ಮ ಅವರೊಂದಿಗೆ ಮತಗಟ್ಟೆಗೆ ಆಗಮಿಸಿ, ಮತದಾನ ಮಾಡುವ ಸಂದರ್ಭದಲ್ಲಿ ಚನ್ನಮ್ಮ ಅವರಿಗೆ ಸಹಾಯ ಮಾಡಿದ್ದರು. ಅದೇ ರೀತಿ ರೇವಣ್ಣ ಕೂಡ ತಮ್ಮ ಪತ್ನಿ ಭವಾನಿ ಮತದಾನ ಮಾಡುತ್ತಿರುವ ಸಂದರ್ಭದಲ್ಲಿ ವೀಕ್ಷಿಸಿದ್ದರು. ಹೊಳೆನರಸಿಪುರ ಪಡುವಲಹಿಪ್ಪೆ ಬೂತ್ ನಂ.27ರಲ್ಲಿ ಈ ಘಟನೆ ನಡೆದಿತ್ತು.

ಗುಪ್ತ ಮತದಾನ ನೀತಿ ಉಲ್ಲಂಘಿಸಿದ ಆರೋಪದ ಮೇರೆಗೆ ಬೂತ್ ಪ್ರಿಸೈಡಿಂಗ್ ಅಧಿಕಾರಿ, ಬೂತ್ ಲೆವೆಲ್ ಅಧಿಕಾರಿಗಳಿಗೂ ಕೂಡ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದೂರನ್ನು ಮುಖ್ಯ ಚುನಾವಣಾ ಆಯುಕ್ತರಿಗೆ ಕಳುಹಿಸಲಾಗುವುದು, ಕಳೆದ ಎರಡು ದಿನಗಳಿಂದ ಚುನಾವಣಾ ಕೆಲದಲ್ಲಿ ನಿರತವಾಗಿದ್ದು, ಅಗತ್ಯ ಬಿದ್ದಲ್ಲಿ ಘಟನೆ ಕುರಿತಂತೆ ಪರಿಶೀಲನೆ ನಡೆಸುವುದಾಗಿ ಸಿಂಗ್ ಟೈಮ್ಸ್ ಇಂಡಿಯಾ ಜತೆ ಮಾತನಾಡುತ್ತ ಹೇಳಿದರು.