ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಮನಮೋಹನ್ ಪರಿಸ್ಥಿತಿ ಕರುಣಾಜನಕ: ಆಡ್ವಾಣಿ
ಮತಸಮರ
ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜಕೀಯ ಅನುಭವ ಇಲ್ಲ ಎಂದು ಹೇಳಿರುವ ಬಿಜೆಪಿ ನಾಯಕ, ಪಕ್ಷದ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ, ಪ್ರತಿನಿರ್ಧಾರಕ್ಕೂ ಸೋನಿಯಾ ಗಾಂಧಿಯವರ ಒಪ್ಪಿಗೆ ಪಡೆಯಬೇಕಿರುವ ಕಾರಣ ಸಿಂಗ್ ಕರುಣಾಜನಕ ಪರಿಸ್ಥಿತಿಯಲ್ಲಿದ್ದಾರೆ ಮತ್ತು ಅವರ ಕಾರ್ಯನಿರ್ವಣಾ ರೀತಿಯು ರಾಷ್ಟ್ರದ 'ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದೆ' ಎಂದು ಹೇಳಿದ್ದಾರೆ.

"ಸಿಂಗ್‌ಜಿ ಅವರಿಗೆ ರಾಜಕೀಯ ಅನುಭವದ ಕೊರತೆ ಇದೆ. ಅವರು ಅಧಿಕಾರ ಸೂತ್ರ ಹಿಡಿದಿದ್ದಾರೆ. ಆದರೆ ಅವರು ಚುನಾಯಿತರಲ್ಲ. ಅವರು ಚುನಾವಣೆಲ್ಲಿ ಸ್ಫರ್ಧಿಸಿದರೆ ಜನತೆ ಅವರನ್ನು ಚುನಾಯಿಸುತ್ತಾರೆ" ಎಂದು ಅವರು ಜೈಪುರದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಚೊಮು ಎಂಬ ಪಟ್ಟಣದಲ್ಲಿ ಚುನಾವಣಾ ಭಾಷಣ ಮಾಡುತ್ತಾ ನುಡಿದರು.

"ಡಾ. ಮನಮೋಹನ್ ಸಿಂಗ್‌ಜಿ ಅವರು 15ನೆ ಪ್ರಧಾನಿ. ಆದರೆ ಅವರು ಲೋಕಸಭೆಗೆ ಚುನಾಯಿತರಲ್ಲ ಎಂದು ನುಡಿದರು.

ನಿಜವಾದ ಅಧಿಕಾರದ ಕೇಂದ್ರ ಸೋನಿಯಾಗಾಂಧಿ. ತನ್ನ ಸಹೋದ್ಯೋಗಿ ಅಥವ ಸಂಪುಟ ಸಚಿವರು ಯಾವದೇ ನಿರ್ಧಾರ ಕೈಗೊಳ್ಳುವ ಮುನ್ನ ಅವರನ್ನು ಸೋನಿಯಾ ನಿವಾಸಕ್ಕೆ ಕಳುಹಿಸಲಾಗುತ್ತದೆ. 10ನೆ ಜನಪಥ್ ನಿವಾಸದಲ್ಲಿ ಅದು ಒಪ್ಪಿಗೆಯಾದರೆ, ಆ ನಿರ್ಧಾರವನ್ನು ಯುಪಿಎ ಸರ್ಕಾರ ಕೈಗೊಳ್ಳುತ್ತದೆ. ಇಂತಹ ಕಾರ್ಯಾಚರಣೆ ನಡೆಸುತ್ತಿರುವ ಪ್ರಥಮ ಪ್ರಧಾನಿ ಅವರಾಗಿದ್ದಾರೆ ಎಂದು ಹೇಳಿದ ಆಡ್ವಾಣಿ ಅವರ ಈ ಪರಿಸ್ಥಿತಿ ನನ್ನಲ್ಲಿ ಕೋಪ ಹುಟ್ಟಿಸುತ್ತಿಲ್ಲ, ಬದಲಿಗೆ ಕರುಣೆ ಉಕ್ಕುವಂತೆ ಮಾಡುತ್ತಿದೆ ಎಂದು ಹೇಳಿದರು.