ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ರಾಹುಲ್ ಹೇಳಿಕೆ- ಡ್ಯಾಮೇಜ್ ಕಂಟ್ರೋಲ್ ಯತ್ನ
ಮತಸಮರ
ರಾಹುಲ್ ಗಾಂಧಿ ಅವರ ಚುನಾವಣೋತ್ತರ ಮೈತ್ರಿಯ ಸಮೀಕರಣದ ಕುರಿತ ಹೇಳಿಕೆ, ಕಾಂಗ್ರೆಸ್‌ನ ಹಾಲಿ ಮಿತ್ರರಲ್ಲಿ ಕೋಪ ತರಿಸಿದ್ದು, ಪಕ್ಷದ ನಾಯಕರು ಇದನ್ನು ಸರಿದೂಗಿಸಲು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. "ನಮ್ಮೊಡನೆ 2004ರಿಂದ 2009ರ ತನಕ ಇದ್ದ ಪಕ್ಷಗಳೊಂದಿದೆ ಮೈತ್ರಿಯನ್ನು ದೃಢ ಪಡಿಸುವುದು ತಮ್ಮ 'ಪ್ರಥಮ ಆದ್ಯತೆ' ಎಂದು ಕಾಂಗ್ರೆಸ್ ಗುರುವಾರ ಘೋಷಿಸಿದೆ.

ತಮಿಳ್ನಾಡು ಮುಖ್ಯಮಂತ್ರಿ ಕುರುಣಾನಿಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ತನ್ನ ಚೆನ್ನೈ ಪ್ರವಾಸವನ್ನು 'ಮುಂದೂಡಿದ್ದ' ಸೋನಿಯಾಗಾಂಧಿ, ಕುರಣಾನಿಧಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಮತ್ತು ರಾಹುಲ್ ಗಾಂಧಿ ಶುಕ್ರವಾರ ತಮಿಳ್ನಾಡಿಗೆ ಆಗಮಿಸಲಿದ್ದು ಸಿವಗಂಗಾ ಮತ್ತು ತ್ರಿಚಿಯಲ್ಲಿ ನಡೆಯಲಿರುವ ಚುನಾವಣಾ ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಇದಲ್ಲದೆ, ಶನಿವಾರದಂದು ಚೆನ್ನೈಗೆ ಆಗಮಿಸಲಿರುವ ಪ್ರಧಾನಿ ಮನಮೋಹನ್ ಸಿಂಗ್ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಕರುಣಾನಿಧಿ ಭಾಗವಹಿಸುವುದಾಗಿ ನಿರೀಕ್ಷಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಸುದರ್ಶನಂ ಹೇಳಿದ್ದಾರೆ.

ಕಾಂಗ್ರೆಸ್ ಜತೆ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿರುವ ಕರುಣಾನಿಧಿ ಪುತ್ರಿ ರಾಜ್ಯಸಭಾ ಸದಸ್ಯೆ ಕನಿಮೋಳ್ ಇದರಲ್ಲಿ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ತಮಿಳ್ನಾಡು ಉಸ್ತುವಾರಿ ಹೊಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಅಜಾದ್ ಅವರು ಕಾಂಗ್ರೆಸ್ ಮತ್ತು ಡಿಎಂಕೆ ಜತೆಯಾಗಿರುವುದಾಗಿ ಹೇಳಿದ್ದಾರೆ. ಸೋನಿಯಾಗಾಂಧಿ ಅವರು ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದು ನಾವು ಒಂದಾಗಿಯೇ ಇರುವುದಾಗಿ ತಿಳಿಸಿದ್ದಾರೆ. ಇದಕ್ಕಿಂತ ಹೆಚ್ಚೇನೂ ಇಲ್ಲ" ಎಂದು ಕನಿಮೋಳಿ ಸ್ಪಷ್ಟಪಡಿಸಿದ್ದಾರೆ.

ವೀರಪ್ಪ ಮೊಯ್ಲಿ ಅವರು ಸ್ಟಾಲಿನ್ ಹಾಗೂ ಇತರ ಡಿಎಂಕೆ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದಿರುವ ಅಜಾದ್, ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. "ರಾಹುಲ್ ಹೇಳಿಕೆಯನ್ನು ಯಾವುದೇ ಪಕ್ಷಕ್ಕೆ ನೀಡಿರುವ ಅಹ್ವಾನದ ಸೂಚನೆ ಎಂದು ಪರಿಗಣಿಸಬಾರದು. ನಮ್ಮೊಂದಿಗೆ 2004ರಿಂದ ಇರುವ ಎಲ್ಲರೊಂದಿಗೂ ನಾವು ಬದ್ಧರಾಗಿದ್ದೇವೆ. 2004ರಿಂದ 2009ರ ತನಕ ನಮ್ಮೊಂದಿಗೆ ಇರುವವರಿಗೆ ನಮ್ಮ ಪ್ರಥಮ ಆದ್ಯತೆ ಎಂದು ಮೊಯ್ಲಿ ಹೇಳಿದ್ದಾರೆ.