ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಚುನಾವಣೆ: ಅಂತಿಮ ಹಂತಕ್ಕಿಂದು ಪ್ರಚಾರ ಅಂತ್ಯ
ಮತಸಮರ
ಒಂಬತ್ತು ರಾಷ್ಟ್ರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಐದನೆ ಮತ್ತು ಕೊನೆಯ ಹಂತದ ಚುನಾವಣೆಯು ಬುಧವಾರ ನಡೆಯಲಿದ್ದು, ಸೋಮವಾರ ಸಾಯಂಕಾಲ ಅಬ್ಬರದ ಪ್ರಚಾರಕ್ಕೆ ತೆರೆಬೀಳಲಿದೆ.

ಐದನೆಯ ಹಂತದಲ್ಲಿ ಲೋಕಸಭೆಯ 86 ಸ್ಥಾನಗಳಿಗೆ ಮೇ 13ರಂದು ಮತದಾನ ನಡೆಯಲಿದೆ. ಹಿಮಾಚಲ ಪ್ರದೇಶದ 4, ಜಮ್ಮು ಕಾಶ್ಮೀರದ 2, ಪಂಜಾಬಿನ 9, ತಮಿಳ್ನಾಡಿನ ಎಲ್ಲಾ 39, ಉತ್ತರಪ್ರದೇಶದ 14, ಪಶ್ಚಿಮ ಬಂಗಾಳದ 11, ಉತ್ತರಖಂಡದ 5 ಮತ್ತು ಚಂಡೀಗಢದ ಮತ್ತು ಪುದುಚೇರಿಯ ತಲಾ ಒಂದು ಸ್ಥಾನಗಳಿಗೆ ಕೊನೆಯ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ಐದನೆಯ ಹಂತದಲ್ಲಿ ಹಲವಾರು ಘಟಾನುಘಟಿಗಳು ಸ್ಫರ್ಧಿಸುತ್ತಿದ್ದಾರೆ. ಕೇಂದ್ರ ಸಚಿವ ಪಿ. ಚಿದಂಬರಂ, ಮಣಿಶಂಕರ್ ಅಯ್ಯರ್, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಬಿಜೆಪಿಯ ಮನೇಕಾ ಗಾಂಧಿ, ವರುಣಾ ಗಾಂಧಿ, ನವಜೋತ್ ಸಿಂಗ್ ಸಿಧು, ಮುಕ್ತಾರ್ ಅಬ್ಬಾಸ್ ನಕ್ವಿ ವಿನೋದ್ ಖನ್ನಾ, ಡಿಎಂಕೆಯ ಎಂ.ಕೆ. ಅಳಗಿರಿ, ದಯಾನಿಧಿ ಮಾರನ್, ಟಿಆರ್ ಬಾಲು ಮತ್ತು ಎ. ರಾಜಾ, ಎಂಡಿಎಂಕೆಯ ವೈಕೋ ತೃಣಮೂಲಕ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಜಯಪ್ರದಾ, ಸಜ್ಜದ್ ಗನಿ ಲೋನೆ ಮತ್ತು ತಮಿಳು ನಟ ಎಂ.ಕಾರ್ತಿಕ್ ಅವರ ಹಣೆಬರಹ ನಿರ್ಧಾರವಾಗಲಿದೆ.

ಎಲ್ಲಾಪಕ್ಷಗಳ ಘಟಾನುಘಟಿಗಳು ಮತದಾರರನ್ನು ಸೆಳೆಯುವ ಕೊನೆಯ ಕ್ಷಣದ ಹೋರಾಟದಲ್ಲಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರುಗಳು ಪಂಜಾಬಿನ ಚುನಾವಣಾ ಸಮಾವೇಶಗಳಲ್ಲಿ ಮಾತನಾಡುತ್ತಿದ್ದಾರೆ. ಇದಲ್ಲದೆ ಹೋಶಿಯಾರ್‌ಪುರದಲ್ಲಿ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್, ಚಂಢೀಗಡದಲ್ಲಿ ಶತ್ರುಘ್ನ ಸಿನ್ಹಾ ಅವರುಗಳು ಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಕುಲು ಮತ್ತು ಉನಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಚುನಾವಣೆಗಳು ಮುಗಿಯುತ್ತ ಬರುತ್ತಿರುವಂತೆ ಹೊಸಹೊಸ ಬೆಳವಣಿಗೆಗಳು ಮೂಡುತ್ತಿವೆ. ಎಡಪಕ್ಷಗಳೊಂದಿಗೆ ತೃತೀಯ ರಂಗದಲ್ಲಿ ಗುರುತಿಸಿಕೊಂಡಿದ್ದ ಆಂಧ್ರದ ಟಿಆರ್‍‌ಎಸ್ ಎನ್‌ಡಿಎಗೆ ಭಾನುವಾರ ವಿಧ್ಯುಕ್ತವಾಗಿ ಸೇರಿದೆ. ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಾರೆ ಎಂದಿದ್ದ ನಿತೀಶ್ ಕುಮಾರ್ ಅವರ ಕೈ ಕುಲುಕಿ ವೇದಿಕೆ ಹಂಚಿಕೊಂಡಿದ್ದಾರೆ.

ಯಾರ್ಯಾರು ಎತ್ತ ಸಾಗುತ್ತಾರೆ ಎಂಬ ಸ್ಪಷ್ಟ ಚಿತ್ರಣ ಮೇ16ರಂದು ಮತ ಎಣಿಕೆ ಮುಗಿದ ಬಳಿಕ ಲಭಿಸಲಿದೆ.