ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಯಾರು ಬೇಕಾದ್ರೂ ಬನ್ನಿ: ಎನ್‌ಡಿಎ ಮುಕ್ತ ಆಹ್ವಾನ
ಮತಸಮರ
ಮೇ 16ರ 'ಪ್ರಳಯ ಕಾಲ' ಸನ್ನಿಹಿತವಾಗುತ್ತಿರುವಂತೆಯೇ ಮೈತ್ರಿಕೂಟ ಭದ್ರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹೆಣಗಾಡುತ್ತಿರುವಂತೆಯೇ, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷವನ್ನು ಎನ್‌ಡಿಎಗೆ ಸೆಳೆದುಕೊಳ್ಳಲು ಹೈದರಾಬಾದಿಗೆ ತೆರಳಿರುವರೆನ್ನಲಾಗಿರುವ ಬಿಜೆಪಿ ಮುಖಂಡ ಎಂ.ವೆಂಕಯ್ಯ ನಾಯ್ಡು, ಭಾವಿ ಪ್ರಧಾನಿಯಾಗಿ ಎಲ್.ಕೆ.ಆಡ್ವಾಣಿಯನ್ನು ಬೆಂಬಲಿಸುವ ಯಾರಿಗೇ ಆದರೂ ಎನ್‌ಡಿಎ ಮುಕ್ತವಾಗಿ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ನಾವು ಬೇರೆ ಪಕ್ಷಗಳೊಂದಿಗೆ ಮೇ 16ರ ಚುನಾವಣಾ ಫಲಿತಾಂಶ ಬಂದ ಬಳಿಕವಷ್ಟೇ ಮಾತನಾಡುತ್ತೇವೆ. ನಾನು ಯಾವುದೇ ಪಕ್ಷವನ್ನು ಅಥವಾ ನಾಯಕನನ್ನು ಹೆಸರಿಸಲು ಇಚ್ಛಿಸುವುದಿಲ್ಲ ಎಂದು ನಾಯ್ಡು ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದ್ದಾರೆ.

ಆದರೆ, ಆಡ್ವಾಣಿಯನ್ನು ಪ್ರಧಾನಿಯಾಗಿ ಒಪ್ಪಿಕೊಳ್ಳುವ ಮತ್ತು ಎನ್‌ಡಿಎ ಸರಕಾರ ಸ್ಥಾಪನೆಗೆ ಇಚ್ಛಿಸುವ ಯಾರನ್ನೇ ಆದರೂ ಬಿಜೆಪಿ ಮುಕ್ತವಾಗಿ ಸ್ವಾಗತಿಸುತ್ತದೆ ಎಂದೂ ನಾಯ್ಡು ತಿಳಿಸಿದ್ದಾರೆ.

ಚುನಾವಣೋತ್ತರ ರಾಜಕೀಯ ದೊಂಬರಾಟದಲ್ಲಿ ಟಿಡಿಪಿ ಮುಖಂಡನ ಬೆಂಬಲವನ್ನು ಎನ್‌ಡಿಎಗೆ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯು ವೆಂಕಯ್ಯ ಅವರನ್ನು ಹೈದರಾಬಾದಿಗೆ ಅಟ್ಟಿದೆ ಎಂದು ಮೂಲಗಳು ತಿಳಿಸಿವೆ.