ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಫಲಿತಾಂಶಕ್ಕೂ ಮುನ್ನ ಗೌಡರಿಂದ ಮಹಾರುದ್ರ ಯಾಗ!
ಮತಸಮರ
ಹೋಮ, ಹವನ, ಯಾಗಕ್ಕೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಎಲ್ಲಿಲ್ಲದ ನಂಟು. ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗಲು ಕೆಲವೇ ದಿನ ಉಳಿದಿರುವ ತನ್ಮಧ್ಯೆಯೇ ನಗರದ ಕುಮಾರ ಪಾರ್ಕ್ ಸಮೀಪದ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಮಹಾರುದ್ರ ಯಾಗ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಹೋಮ, ಹವನ, ಯಜ್ಞ-ಯಾಗಾದಿ ದೇವೆಗೌಡರಿಗೇನು ಹೊಸದಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತ ನಿವಾಸದ ಸಮೀಪದಲ್ಲೇ ಇರುವ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ನಡೆದ ಯಾಗ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಗೌಡರ ಯಾಗದ ನಿಮಿತ್ತ ಕುಮಾರ ಪಾರ್ಕ್ ರಸ್ತೆಯ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ಯಾಗದಲ್ಲಿ ದೇವೇಗೌಡರು ಏಕಾಂಗಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ದೇವೇಗೌಡರ ಕೆಲ ಕಾರ್ಯಕರ್ತರನ್ನು ಬಿಟ್ಟು ಯಾರಿಗೂ ಪ್ರವೇಶವಿರಲಿಲ್ಲ. ಮಾಧ್ಯಮ ಪ್ರತಿನಿಧಿಗಳಿಗೂ ಪ್ರವೇಶ ನಿಷೇಧಿಸಲಾಗಿತ್ತು. ಮಹಾರುದ್ರ ಯಾಗಕ್ಕೆ ತಮಿಳುನಾಡು ಹಾಗೂ ಕೇರಳದಿಂದ ಅರ್ಚಕರನ್ನು ಕರೆತರಲಾಗಿತ್ತು.

ಗೌಡರು ವಾಮಚಾರ ಮಾಡಿಸುವುದರಲ್ಲಿ ಪಳಗಿದ ಕೈ ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು. ಆ ನಿಟ್ಟಿನಲ್ಲಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ನಡೆಸಿರುವುದು ಮಹಾರುದ್ರ ಯಾಗವೇ ಅಥವಾ ವಾಮಚಾರಕ್ಕೆ ಸಂಬಂಧಿಸಿದ ಹೋಮವೇ?ಎಂಬುದು ಸದ್ಯ ಎಲ್ಲರ ತಲೆಯೊಳಗೆ ಸುಳಿಯುತ್ತಿರುವ ಪ್ರಶ್ನೆಯಾಗಿದೆ!