ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಚತುರ್ಥರಂಗದಲ್ಲಿ ಬಿಕ್ಕಟ್ಟಿಲ್ಲ: ಪಾಸ್ವಾನ್ ಉವಾಚ
ಮತಸಮರ
ಚತುರ್ಥ ರಂಗದಲ್ಲಿ ಬಿಕ್ಕಟ್ಟು ಇದೆ ಎಂಬ ವರದಿಯನ್ನು ತಳ್ಳಿಹಾಕಿರುವ ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್, ತಮ್ಮ ಪಕ್ಷ, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷ ಒಂದಾಗಿಯೇ ಇದ್ದು, ತಾವು ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ರಚಿಸಲಿದ್ದೇವೆ ಎಂದು ಮಂಗಳವಾರ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಲ್‌ಜೆಪಿ ಮತ್ತು ಆರ್‌ಜೆಡಿ ಯುಪಿಎ ಅಂಗವಾಗಿದ್ದು, ಸಮಾಜವಾದಿ ಪಕ್ಷವು ಈ ಮೈತ್ರಿಕೂಟವನ್ನು ಬೆಂಬಲಿಸುತ್ತದೆ. ಕೇಂದ್ರದಲ್ಲಿ ಜಾತ್ಯತೀತ ಸರ್ಕಾರದ ರಚನೆಗಾಗಿ ನಾವೆಲ್ಲರೂ ಒಂದಾಗಿ ದುಡಿಯುತ್ತಿದ್ದೇವೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಸೋಮವಾರವಷ್ಟೇ ರಾಂಪುರದಲ್ಲಿನ ರಾಲಿಯಲ್ಲಿ ಭಾಗವಹಿಸದೇ ಇದ್ದ ಕಾರಣವನ್ನು ಕೇಳಿದಾಗ, ಆದಾಗ್ಯೂ ಅಮರ್ ಸಿಂಗ್ ಅವರು ರಾಲಿಯಲ್ಲಿ ಭಾಗವಹಿಸಲು ಆಮಂತ್ರಿಸಿದ್ದರೂ ತಾವು ಈ ಮೊದಲೇ ಬೇರೆ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿರುವುದರಿಂದ ಪಾಲ್ಗೊಳ್ಳಲು ಆಗಿಲ್ಲ ಎಂದು ಪಾಸ್ವಾನ್ ಸ್ಪಷ್ಟನೆ ನೀಡಿದ್ದಾರೆ.

ಆ ಹಿನ್ನೆಲೆಯಲ್ಲಿ ಪಾಸ್ವಾನ್ ಗೈರು ಹಾಜರಾಗಿದ್ದರಿಂದ ಚತುರ್ಥರಂಗದಲ್ಲಿ ಬಿಕ್ಕಟ್ಟು ಆರಂಭವಾಗಿದೆ ಎಂಬ ಊಹಾಪೋಹ ಹಬ್ಬಿರುವ ನಿಟ್ಟಿನಲ್ಲಿ ಈ ಹೇಳಿಕೆ ಬಹಿರಂಗಗೊಂಡಿದೆ.

ನಾವು, ಆರ್‌ಜೆಡಿ ಹಾಗೂ ಮುಲಾಯಂ ಸಿಂಗ್ ಒಟ್ಟಿಗೆ ಇದ್ದೇವೆ. ಮುಲಾಯಂ ಸಿಂಗ್ ಅವರ ಬೆಂಬಲ ಇಲ್ಲದೇ ಕೇಂದ್ರದಲ್ಲಿ ಸರ್ಕಾರ ರಚನೆ ಸಾಧ್ಯವಿದೆಯೇ ಎಂದು ಪಾಸ್ವಾನ್ ಈ ಸಂದರ್ಭದಲ್ಲಿ ಪ್ರಶ್ನಿಸಿದರು.