ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಮತದಾರರ 'ಮಹಾ ನಿರ್ಣಯ'ಕ್ಕೆ ಕ್ಷಣಗಣನೆ ಆರಂಭ
ಮತಸಮರ
ಸುಮಾರು ಒಂದು ತಿಂಗಳ ಸುದೀರ್ಘ ಪ್ರಜಾಪ್ರಭುತ್ವ ಪ್ರಕ್ರಿಯೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಒಟ್ಟು 543 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಿರುವ ಎಲ್ಲ 8,070 ಮಂದಿ ಅಭ್ಯರ್ಥಿಗಳ ಹಣೆಬರಹ ಶನಿವಾರ ಸಂಜೆಯೊಳಗೆ ನಿರ್ಧಾರವಾಗಲಿದೆ. ಇದೇ ವೇಳೆ ಆಂಧ್ರಪ್ರದೇಶ, ಒರಿಸ್ಸಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶವೂ ಶನಿವಾರವೇ ಹೊರಬೀಳಲಿದೆ.

ದೇಶಾದ್ಯಂತ 1080 ಮತ ಎಣಿಕೆ ಕೇಂದ್ರಗಳಲ್ಲಿ 4,260 ಹಾಲ್‌ಗಳಲ್ಲಿ ಸುಮಾರು 60 ಸಾವಿರ ಮಂದಿ ಸಿಬ್ಬಂದಿಗಳು ಬೆಳಿಗ್ಗೆ 8 ಗಂಟೆಗೆ ಎಲೆಕ್ಟ್ರಾನಿಕ್ ಮತ ಯಂತ್ರಗಳೊಳಗಿರುವ ಮತಗಳ ಎಣಿಕೆ ಆರಂಭಿಸಲಿದ್ದಾರೆ. ವೆಬ್‌ದುನಿಯಾ ಕೂಡ ಆನ್‌ಲೈನ್‌ನಲ್ಲಿ ಲೈವ್ ಆಗಿ ಫಲಿತಾಂಶವನ್ನು ನೀಡಲಿದೆ.

ಚುನಾವಣಾ ಫಲಿತಾಂಶ: ನಕಾಶೆಸಹಿತ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಫಲಿತಾಂಶದ ನಕಾಶೆ ಇಲ್ಲದ ವಿವರಗಳನ್ನು ಇಲ್ಲಿ ನೋಡಿ.

545 ಸದಸ್ಯರ (ಇಬ್ಬರು ನಾಮನಿರ್ದೇಶಿತರು ಸೇರಿ) ಲೋಕಸಭೆಯಲ್ಲಿ ಸರಕಾರ ರಚಿಸಬೇಕಿದ್ದರೆ 272 ಸಂಖ್ಯಾಬಲ ಅತ್ಯಗತ್ಯ. ಏಪ್ರಿಲ್ 16ರಿಂದ ಮೇ 13ರವರೆಗೆ ಐದು ಹಂತಗಳಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ, ಒಟ್ಟು 71.377 ಕೋಟಿ ಮತದಾರರಲ್ಲಿ ಅರ್ಧಕ್ಕಿಂತ ಒಂದಷ್ಟು ಹೆಚ್ಚು ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿ ಹೊಸ ಸರಕಾರ ರಚನೆಗೆ ದಾರಿ ಮಾಡಿಕೊಟ್ಟಿದ್ದಾರೆ.

ಅತಂತ್ರ ಸಂಸತ್ತು ಸೃಷ್ಟಿಯಾಗುವ ಆತಂಕಗಳ ನಡುವೆ ಹೊಸ ಮಿತ್ರರ ಹುಡುಕಾಟಕ್ಕೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಮೇರೆ ಮೀರಿದೆ. ಸಂಖ್ಯಾ ಬಲ ಒಗ್ಗೂಡಿಸಲು ಪ್ರಮುಖ ಮಿತ್ರಕೂಟಗಳಾದ ಕಾಂಗ್ರೆಸ್ ನೇತೃತ್ವದ ಯುಪಿಎ, ಬಿಜೆಪಿ ನೇತೃತ್ವದ ಎನ್‌ಡಿಎ, ಎಡರಂಗ ಮತ್ತಿತರರುಳ್ಳ ತೃತೀಯ ರಂಗಗಳು ಕಣಕ್ಕಿಳಿದಿವೆ. ಮಿತ್ರರನ್ನು ಬಾಚಿಕೊಳ್ಳಲು ತಮ್ಮೆರಡೂ ಕೈಗಳನ್ನು ಅಗತ್ಯಕ್ಕಿಂತ ಹೆಚ್ಚೇ ಚಾಚುತ್ತಿರುವ ಈ ಕೂಟಗಳಿಗೆ ಶನಿವಾರ ಮಧ್ಯಾಹ್ನದ ವೇಳೆ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆಗಳಿದ್ದು, ಮಿತ್ರಕೂಟ ರಚನೆಯನ್ನು ಚುರುಕುಗೊಳಿಸಬೇಕಾಗುತ್ತದೆ.