ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಶುಕ್ರವಾರ ಯಾರು ಯಾರಿಗೆ ಗಾಳ ಹಾಕಿದ್ರು?
ಮತಸಮರ
ಗಾಳ ಹಾಕುವ ಪ್ರಕ್ರಿಯೆ ಭರದಿಂದ ಸಾಗಿರುವಂತೆಯೇ, ಬಿಜೆಪಿಯು ಲೋಕಜನ ಶಕ್ತಿ ಪಕ್ಷ (ಎಲ್‌ಜೆಪಿ) ಮುಖಂಡ ರಾಮ ವಿಲಾಸ್ ಪಾಸ್ವಾನ್ ಅವರನ್ನು ಸಂಪರ್ಕಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಏನೇ ಆದರೂ ಕೇಂದ್ರದಲ್ಲಿ 'ಕಮಲ ಅರಳಲು' ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೆ, ಮತ್ತೊಂದೆಡೆ ರಾಜನಾಥ್ ಸಿಂಗ್ ಅವರು ನನ್ನ ಮಿತ್ರ. ಆದರೆ ಎನ್‌ಡಿಎಗೆ ಸಮಾಜವಾದಿ ಪಕ್ಷ ಬೆಂಬಲ ನೀಡುವ ಬಗ್ಗೆ ನಾವು ಚರ್ಚೆ ಮಾಡಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಪಾಸ್ವಾನ್ ಅವರು ಸುದ್ದಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದ್ದು, ಎನ್‌ಡಿಎ ಬೆಂಬಲಿಸುವುದಿಲ್ಲ, ಕೇಂದ್ರದಲ್ಲಿ ಜಾತ್ಯತೀತ ಸರಕಾರ ಸ್ಥಾಪನೆಗೆ ಎಲ್ಲ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ಈ ಮಧ್ಯೆ, ಎನ್‌ಡಿಎ ಮುಖಂಡರಾದ ಜೆಡಿಯು ಅಧ್ಯಕ್ಷ ಶರದ್ ಯಾದವ್ ಮತ್ತು ಆರ್ಎಲ್‌ಡಿ ಅಧ್ಯಕ್ಷ ಅಜಿತ್ ಸಿಂಗ್ ಅವರು ಪಾಸ್ವಾನ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯೆ ನಜ್ಮಾ ಹೆಫ್ತುಲ್ಲಾ ಕೂಡ ಎರಡು ದಿನಗಳ ಹಿಂದೆ ಪಾಸ್ವಾನ್‌ಗೆ ಕರೆ ಮಾಡಿದ್ದರು.

ಸರಕಾರ ಸೇರಲು ಎಸ್ಪಿಗೆ ಕಾಂಗ್ರೆಸ್ ಆಹ್ವಾ

ಇನ್ನೊಂದೆಡೆ, ಗುರುವಾರ ರಾತ್ರಿ ಸಮಾಜವಾದಿ ಪಾರ್ಟಿ ನಾಯಕ ಅಮರ್ ಸಿಂಗ್‌ಗೆ ಕರೆ ಮಾಡಿದ ಕಾಂಗ್ರೆಸ್ ನೇತಾರ ಪ್ರಣಬ್ ಮುಖರ್ಜಿ, ಕೇಂದ್ರದಲ್ಲಿ ರಚನೆಯಾಗಲಿರುವ ಯುಪಿಎ ಸರಕಾರ ಸೇರಿಕೊಳ್ಳುವಂತೆ ಆಹ್ವಾನ ನೀಡಿದ್ದಾರೆ.

ಎನ್‌ಡಿಎ, ಯುಪಿಎ ಸಂಪರ್ಕದಲ್ಲಿಲ್ಲ: ಬಿಎಸ್ಪಿ
ಕೇಂದ್ರದಲ್ಲಿ ಸರಕಾರ ರಚನೆಗೆ ಯುಪಿಎ ಮತ್ತು ಎನ್‌ಡಿಎಗಳೊಂದಿಗೆ ಮಾತುಕತೆ ನಡೆಸುತ್ತಿರುವಾಗಿನ ಕುರಿತ ವರದಿಗಳನ್ನು ಆಧಾರರಹಿತ ಎಂದು ತಳ್ಳಿ ಹಾಕಿರುವ ಮಾಯಾವತಿ ನೇತೃತ್ವದ ಬಿಎಸ್ಪಿ, ಯಾರೊಂದಿಗೂ ನಾವು ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.

ನವೀನ್ ಪಟ್ನಾಯಕ್ (ಬಿಜೆಡಿ)ಯಲ್ಲಿ ಭರವಸೆಯ ಬೆಳಕು ಕಂಡ ಕಾಂಗ್ರೆಸ
ಇತ್ತ ಒರಿಸ್ಸಾದಲ್ಲಿ ಬಿಜು ಜನತಾ ದಳದಲ್ಲಿ ಯುಪಿಎ ಭರವಸೆಯ ಬೆಳಕು ಕಂಡಿದೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಡಿ ತಟಸ್ಥವಾಗಿ ಉಳಿಯುವುದಾಗಿ ಕಾಂಗ್ರೆಸ್‌ಗೆ ಪಕ್ಷದ ಮುಖ್ಯಸ್ಥ, ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

11 ವರ್ಷಗಳ ಬಿಜೆಪಿ ಸಹವಾಸ ಮುರಿದುಕೊಂಡಿದ್ದ ನವೀನ್, ಆ ಬಳಿಕ ಕಾಂಗ್ರೆಸ್ ಆಗಲೀ ಬಿಜೆಪಿಯಾಗಲೀ ಯಾರಿಗೂ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು ಮತ್ತು ತೃತೀಯ ರಂಗಕ್ಕೆ ಬೆಂಬಲದ ಭರವಸೆಯನ್ನು ನೀಡಿದ್ದರು.

ಎನ್‌ಡಿಎಗೆ ಟಿಆರ್ಎಸ್ ಭರವಸ
ನಾವು ಎನ್‌ಡಿಎಗೆ ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಅದು ಭರವಸೆ ನೀಡಿದೆ ಎಂದು ಶುಕ್ರವಾರ ತಿಳಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಚಂದ್ರಶೇಖರ ರಾವ್, ಈ ಬಗ್ಗೆ ಕಾಂಗ್ರೆಸ್ ನೀಡಿದ ವಾಗ್ದಾನವನ್ನು ಮುರಿದಿದೆ ಎಂದು ಟೀಕಿಸಿದ್ದಾರೆ.

ಎಲ್ಲದಕ್ಕೂ ಸಜ್ಜಾದ ಪ್ರಜಾ ರಾಜ್ಯ
ಆಂಧ್ರದ ಮತ್ತೊಂದು ಹೊಸ ಪಕ್ಷ ಪ್ರಜಾ ರಾಜ್ಯಂ ಹೇಳಿಕೆ ನೀಡಿ, ತಮ್ಮ ಪಕ್ಷದ ಬಾಗಿಲುಗಳು ಸಂಪೂರ್ಣವಾಗಿ ಮುಕ್ತವಾಗಿದ್ದು, ಯಾರು ಬೇಕಾದರೂ ನಮ್ಮನ್ನು ಬೇಟೆಯಾಡಬಹುದು ಎಂದು ಹೇಳಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡರಲ್ಲೂ ಒಂದಷ್ಟು ಸಂಖ್ಯಾಬಲ ಪಡೆದುಕೊಳ್ಳುವ ನಿರೀಕ್ಷೆಯಲ್ಲಿರುವ ನಟ ಚಿರಂಜೀವಿ ಅವರ ಈ ಪಕ್ಷ, ಸದ್ಯಕ್ಕೆ ತೃತೀಯ ರಂಗ ಒಡೆದ ರಂಗವಾಗಿದೆ ಎಂದಿದೆ. ಎನ್‌ಡಿಎ ಅಥವಾ ಯುಪಿಎ ಬೆಂಬಲಿಸುವ ಬಗ್ಗೆ ಯೋಚಿಸಿ ನಿರ್ಧರಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಲ್ಲು ಅರವಿಂದ್ ತಿಳಿಸಿದ್ದಾರೆ.