ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಮಾಯಾ, ಪವಾರ್ ಸರ್ಕಾರ ರಚಿಸಿದರೆ ನಮ್ಮ ಸಹಕಾರ: ಬಿಜೆಡಿ
ಮತಸಮರ
ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಅಥವಾ ಮಾಯಾವತಿಯ ಬಿಎಸ್‌ಪಿ ಕೇಂದ್ರದಲ್ಲಿ ಸರ್ಕಾರ ರಚನೆಯತ್ತ ತೊಡಗಿದರೆ ಸಹಕಾರ ನೀಡುವಲ್ಲಿ ತಾನು ಯಾವುದೇ ಆಕ್ಷೇಪ ಮಾಡುವುದಿಲ್ಲ ಎಂದು ಒರಿಸ್ಸಾದಲ್ಲಿ ಅಧಿಕಾರದಲ್ಲಿರುವ ಬಿಜೆಡಿ ಹೇಳಿಕೆ ನೀಡಿದೆ.

ಅಲ್ಲದೆ, ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಗೆ ತನ್ನಿಂದ ಖಂಡಿತ ಸಹಕಾರ ಸಿಗದು ಎಂದೂ ಬಿಜೆಡಿ ಮತ್ತ ಘೋಷಿಸಿಕೊಂಡಿದೆ.

ಪತ್ರಕರ್ತರಲ್ಲಿ ಮಾತನಾಡಿದ ಬಿಜೆಡಿಯ ರೂಪುರೇಷೆಯ ರುವಾರಿ ಹಾಗೂ ರಾಜ್ಯಸಭಾ ಸದಸ್ಯ ಪ್ಯಾರಿ ಮೋಹನ್ ಮಹಾಪಾತ್ರ, ಮಾಯಾವತಿ, ಶರದ್ ಪವಾರ್ ಸರ್ಕಾರ ರಚನೆಯತ್ತ ಹೊರಟರೆ ಬಿಜೆಡಿ ಸಹಕಾರ ನೀಡುತ್ತದೆ. ಸಿಪಿಎಂನ ಪ್ರಕಾಶ್ ಕಾರಟ್ ಕೂಡಾ ಸರ್ಕಾರ ರಚನೆಗೆ ಲೆಕ್ಕಾಚಾರ ಹಾಕಿದರೆ ಅವರಿಗೂ ನಮ್ಮ ಸಹಕಾರ ನೀಡುವಲ್ಲಿ ನಾವು ಹಿಂದೆ ಬೀಳುವುದಿಲ್ಲ ಎಂದು ಹೇಳಿಕೊಂಡರು.

ಬಿಜೆಡಿಯ ಹಿರಿಯ ಮುಖಂಡ ದಾಮೋದರ್ ರೂತ್ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ನೇತೃತ್ವದ ಸರ್ಕಾರಗಳು ಒರಿಸ್ಸಾದ ಕಷ್ಟವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ಎಂದೂ ಬಿಜೆಡಿ ಸಹಕಾರ ನೀಡದು. ಒರಿಸ್ಸಾ ಸ್ಥಿತಿ ಮನವರಿಕೆಯಾಗಲು ಕೇವಲ ಶರದ್, ಮಯಾವತಿಯಂತಹ ನಾಯಕರಿಗಷ್ಟೇ ಸಾಧ್ಯ ಎಂದರು.