ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಸೋಮವಾರ ಮನಮೋಹನ್ ಸಿಂಗ್ ರಾಜೀನಾಮೆ?
ಮತಸಮರ
PTI
ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಕೊಡುವ ನಿರೀಕ್ಷೆಯಿದೆ. ಆದರೂ, ಹೊಸ ಸರ್ಕಾರ ರಚನೆಯಾಗುವವರೆಗೆ ಪ್ರಧಾನಮಂತ್ರಿಯಾಗಿ ಮುಂದುವರಿಯಬೇಕು ಎಂದು ರಾಷ್ಟ್ಪತಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ ಎಂಬ ಮಾತೂ ಕೇಳಿ ಬಂದಿದೆ.

ಮೂಲಗಳ ಪ್ರಕಾರ ಪ್ರದಾನಮಂತ್ರಿ ಸೋಮವಾರ ತನ್ನ ಕ್ಯಾಬಿನೆಟ್ ಸಚಿವರುಗಳ ಸಭೆ ಕರೆದಿದ್ದು, ಎಲ್ಲರೂ ಒಟ್ಟಾಗಿ ರಾಜೀನಾಮೆ ಕೊಡುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಿದ್ದಾರೆ. ಅದೇ ದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕೂಡ ಪ್ರಧಾನ ಮಂತ್ರಿಗಳನ್ನು ಮಾತುಕತೆಗೆ ಕರೆಯಲಿದ್ದು, ಎಲ್ಲಾ ಸಚಿವರು ಅಂದು ರಾಜೀನಾಮೆ ನೀಡಲು ಸೂಚಿಸಲಿದ್ದಾರೆ ಎಂದೂ ಹೇಳಲಾಗಿದೆ.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಈವರೆಗೆ ಆಡಳಿತದಲ್ಲಿದ್ದ ಸರ್ಕಾರ ರಾಜೀನಾಮೆ ಕೊಡುವುದು ಸಂವಿಧಾನದ ನಿಯಮ. ಅದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೂ ಒಮ್ಮೆ ರಾಜೀನಾಮೆ ಕೊಟ್ಟೇ ಮತ್ತೆ ಆ ಸರ್ಕಾರ ಪ್ರಮಾಣ ವಚನ ಸ್ವೀಕರಿಸುತ್ತದೆ.