ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಒರಿಸ್ಸಾದಲ್ಲಿ ಗೆಲುವಿನತ್ತ ಬಿಜೆಡಿ
ಮತಸಮರ
PTI
ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಂಡ ಹಾಗೂ ಪ್ರಸ್ತುತ ಒರಿಸ್ಸಾದಲ್ಲಿ ಅಧಿಕಾರದಲ್ಲಿರುವ ಬಿಜು ಜನತಾ ದಳ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನತ್ತ ಸಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಉಳಿದೆಲ್ಲಾ ಪಕ್ಷಗಳಿಗಿಂತ ಬಿಜೆಡಿ ಮುಂದಿದ್ದು, 147 ವಿಧಾನಸಭಾ ಕ್ಷೇತ್ರಗಳ ಪೈಕಿ 65 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

24 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುಂದಿದ್ದರೆ, ಬಿಜೆಪಿ ಅಭ್ಯರ್ಥಿಗಳು ಕೇವಲ 13 ಕ್ಷೇತ್ರಗಳಲ್ಲು ಮುನ್ನಡೆಯಲ್ಲಿದ್ದಾರೆ. ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯ ಬಿಜೆಡಿಯ ಮೇಲುಗೈಯೇ ನಿಚ್ಛಳವಾಗಿ ಗೋಚರಿಸುತ್ತಿದೆ.

ಮುಖ್ಯಮಂತ್ರಿ ಹಾಗೂ ಬಿಜೆಡಿಯ ಮುಖಂಡ ನವೀನ್ ಪಟ್ನಾಯಿಕ್ ತಮ್ಮ ಹಿಂಜಿಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಘಬ್ ಪರಿದಾ ಅವರಿಗಿಂತ ಮುಂದಿದ್ದಾರೆ. ಅಲ್ಲದೆ ಬಿಜೆಡಿಯ ಹಿರಿಯ ಮುಖಂಡರಾದ ದಾಮೋದರ ರೂತ್, ಬಿಷ್ಣು ದಾಸ್, ಬಿಕ್ರಮ್ ಕೇಸರಿ ಅರುಖ್ ಕ್ರಮವಾಗಿ ತಮ್ಮ ಕ್ಷೇತ್ರಗಳಾದ ಪರಾದೀಪ್, ಜಗತ್‌ಸಿಂಗ್‌ಪುರ್, ಭಂಜಾನಗರ್‌ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳು ಮಲ್ಕಂಗಿರಿ, ಕುಚಿಂದಾ, ಸನಖೇಮುಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಆದರೆ ಪಕ್ಷದ ಹಿರಿಯ ಮುಖಂಡ ಜೆ.ಬಿ.ಪಟ್ನಾಯಿಕ್ ಅವರ ಅಳಿಯ ಸೌಮ್ಯರಾಜನ್ ಪಟ್ನಾಯಿಕ್ ಮಾತ್ರ ತಮ್ಮ ಕ್ಷೇತ್ರವಾದ ಖಂಡಪರಾದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.