ಅಧಿಕಾರ ಹಿಡಿಯಲು ಇತರರ ಹಂಗು ಬೇಕಿಲ್ಲ ಎಂಬ ಅಂಶ ಹೊರಬೀಳುತ್ತಲೇ, ಕಾಂಗ್ರೆಸ್ ಪಾಳಯದಲ್ಲಿ ಹರ್ಷೋತ್ಸಾಹ ಗರಿಗೆದರಿದ್ದು, ಇದೀಗ ಸರ್ಕಾರ ರಚನೆಯ ತರಾತುರಿ ಕಂಡು ಬರುತ್ತಿದೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅಭಿನಂದಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ದಂಡು ನಂ.10 ಜನಪಥದತ್ತ ಸಾಗುತ್ತಿದ್ದು, ಎಲ್ಲೆಲ್ಲೂ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಫಲಿತಾಂಶದ ಕೆಲವು ಪ್ರಮುಖ ಅಂಶಗಳು.
*ವಿರೋಧಿ ಸ್ಥಾನದಲ್ಲಿ ಕುಳಿತುಕೊಳ್ಳಲು ಎಡಪಕ್ಷಗಳು ಸಿದ್ಧ.
*ಪ್ರಮುಖ ಖಾತೆಗಳ ಕುರಿತು ಸೋನಿಯಾ, ರಾಹುಲ್ ಪ್ರಧಾನಿ ಜತೆ ಚರ್ಚೆ
*ಪ್ರಮುಖ ಖಾತೆಗಳ ಬಗ್ಗೆ ರಾಜಿ ಇಲ್ಲ
*ವಿತ್ತ, ಗೃಹ, ವಿದೇಶಾಂಗ, ರಕ್ಷಣಾ ಖಾತೆ ಯಾರಿಗೂ ಕೊಡಲ್ಲ
*ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅಭಿನಂದಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
*ಸುರೇಶ್ ಕಲ್ಮಾಡಿ ಪುಣೆಯಲ್ಲಿ ಮುನ್ನಡೆ
ಗುರುದಾಸ್ ದಾಸ್‌ಗುಪ್ತಾ ಘಟಾಲ್ ಕ್ಷೇತ್ರದಲ್ಲಿ ಮುನ್ನಡೆ
ಶ್ರೀಪ್ರಕಾಶ್ ಜೈಸ್ವಾಲ್ ಕಾನ್ಪುರದಲ್ಲಿ
ಬಾರಾಮುಲ್ಲಾದಲ್ಲಿ ಸಾಜದ್ ಗನಿ ಲೋನ್ ಹಿನ್ನಡೆ
*ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ 92,133 ಮತಗಳ ಅಂತರದಿಂದ ಗಜಿಯಾಬಾದ್‌ನಲ್ಲಿ ಗೆಲುವು
*ಹಾಜಿಪುರದಲ್ಲಿ ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್‌ಗೆ ಸೋಲು
*ಪಿ. ಚಿದಂಬರಂ 3,000 ಮತಗಳ ಅಂತರದಿಂದ ಸೋಲು, ಮರು ಎಣಿಕೆಗೆ ಚುನಾವಣಾ ಆಯೋಗದ ಆದೇಶ
*ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಜಾರ್ಜ್ ಫರ್ನಾಂಡಿಸ್ ಹಿನ್ನಡೆ
*ಅಜಿಂ ಖಾನ್ ಅವರ ತೀವ್ರ ಟೀಕೆಗೆ ಎದುರಾಗಿದ್ದ ಚಿತ್ರತಾರೆ ಜಯಪ್ರದಾ ಗೆಲುವು