ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ರಾಜ್ಯದಿಂದ 4 ಮಾಜಿ ಮುಖ್ಯಮಂತ್ರಿಗಳು ಸಂಸತ್ತಿಗೆ
ಮತಸಮರ
* ಕಣದಲ್ಲಿದ್ದ ಐವರು ಮಾಜಿ ಮುಖ್ಯಮಂತ್ರಿಗಳಲ್ಲಿ ಎಸ್.ಬಂಗಾರಪ್ಪಗೆ ಸೋಲು, ವೀರಪ್ಪ ಮೊಯ್ಲಿ, ಧರ್ಮ ಸಿಂಗ್, ದೇವೇಗೌಡ, ಕುಮಾರಸ್ವಾಮಿ ವಿಜಯ.

* ಅಪ್ಪ-ಮಗ ಸಂಸತ್ತಿಗೆ: ಕರ್ನಾಟಕದಿಂದ 15ನೇ ಲೋಕಸಭೆಗೆ ಆಯ್ಕೆಯಾಗಿದ್ದಾರೆ ಅಪ್ಪ-ಮಗ, ಮಾಜಿ ಮುಖ್ಯಮಂತ್ರಿಗಳಾದ ದೇವೇಗೌಡ-ಕುಮಾರಸ್ವಾಮಿ ಜೋಡಿ.

* ಬೆಂಗಳೂರು ದಕ್ಷಿಣ ಕ್ಷೇತ್ರ ಉಳಿಸಿಕೊಂಡ ಅನಂತ್ ಕುಮಾರ್ ಅವರಿಗೆ ದಾಖಲೆಯ 6ನೇ ಬಾರಿಯ ಗೆಲುವು.

* ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಕೂಡ 6ನೇ ಬಾರಿಗೆ ಸಂಸತ್ತು ಪ್ರವೇಶಿಸುತ್ತಿದ್ದಾರೆ.

* ಶಿವಮೊಗ್ಗದಲ್ಲಿ ಎಸ್.ಬಂಗಾರಪ್ಪಗೆ ಸೋಲುಣಿಸಿದ ರಾಜಕೀಯ ಶಿಶು, ಮುಖ್ಯಮಂತ್ರಿ ಪುತ್ರ ಬಿ.ವೈ.ರಾಘವೇಂದ್ರ.

* ಹಾಸನದಲ್ಲಿ ದೇವೇಗೌಡರ ಗೆಲುವಿನ ಅಂತರ 2.91 ಲಕ್ಷ ಮತಗಳು!

* ಕಾಂಗ್ರೆಸ್‌ನ ಘಟಾನುಘಟಿಗಳಾದ ಅಂಬರೀಶ್, ಬಂಗಾರಪ್ಪ, ಮಾರ್ಗರೆಟ್ ಆಳ್ವಾ, ತೇಜಸ್ವಿನಿ ರಮೇಶ್, ಎಸ್.ಎಸ್.ಮಲ್ಲಿಕಾರ್ಜುನ್, ಜಾಫರ್ ಶರೀಫ್, ಜನಾರ್ದನ ಪೂಜಾರಿಗೆ ಸೋಲಿನ ಬಿಸಿ.

* ವೀರಪ್ಪ ಮೊಯ್ಲಿಯ ಐದನೇ ಬಾರಿ ಸಂಸತ್ ಪ್ರವೇಶಿಸುವ ಪ್ರಯತ್ನ ದೂರದ ಚಿಕ್ಕಬಳ್ಳಾಪುರದಲ್ಲಿ ಯಶಸ್ಸು ನೀಡಿದೆ.

* ಕರ್ನಾಟಕದ ಲವ-ಕುಶರೆಂದೇ ಖ್ಯಾತರಾದ 8 ಬಾರಿ ಎಂಎಲ್ಎ ಸೀಟು ಗೆದ್ದು 9ನೇ ಬಾರಿ ಸೋತಿದ್ದ ಧರ್ಮ ಸಿಂಗ್- 10 ಬಾರಿ ಎಂಎಲ್ಎ ಸ್ಥಾನಕ್ಕೆ ಜಯಿಸುತ್ತಲೇ ಬಂದಿದ್ದ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿಗೆ ಮೊದಲ ಪ್ರಯತ್ನದಲ್ಲಿ ಆಯ್ಕೆಯಾಗಿದ್ದಾರೆ.

* ಬಿಜೆಪಿಯಿಂದ ಕಾಂಗ್ರೆಸಿಗೆ ಹಾರಿದ್ದ ಎಚ್.ಟಿ.ಸಾಂಗ್ಲಿಯಾನ ಅವರು ಸೋಲನ್ನಪ್ಪಿದ್ದಾರೆ.

* ಬೀದರಿನಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಹಾಗೂ ವಿಧಾನಸಭೆ ಉಪಚುನಾವಣೆಗೆ ಸ್ಪರ್ಧಿಸಿದ್ದ ಮಗ ಸೂರ್ಯಕಾಂತ ನಾಗಮಾರಪಳ್ಳಿ ಇಬ್ಬರೂ ಸೋಲನ್ನಪ್ಪಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಗುರುಪಾದಪ್ಪ ನಾಗಮಾರಪಳ್ಳಿ, ಆ ಕ್ಷೇತ್ರದಿಂದ ತಮ್ಮ ಮಗನನ್ನು ವಿಧಾನಸಭೆಗೆ ಕಳುಹಿಸಲು ಪ್ರಯತ್ನಿಸಿ ಮಗನೊಂದಿಗೆ ತಾವೂ ಸೋತರು.