ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಸಿಂಗ್ ಈಸ್ ಕಿಂಗ್, ನಾಟ್ ರಾಹುಲ್
ಮತಸಮರ
ಯುಪಿಎ ಮತ್ತೊಮ್ಮೆ ಅಧಿಕಾರ ಏರುವ ಸ್ಪಷ್ಟ ಸೂಚನೆ ಲಭಿಸುತ್ತಲೆ, ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ, ಭಾವಿ ಪ್ರಧಾನಿ ಎಂಬುದಾಗಿ ಕಾಂಗ್ರೆಸ್ ಶನಿವಾರ ಸ್ಪಷ್ಟಪಡಿಸಿದೆ. ಚುನಾವಣೆಗೆ ಮುನ್ನ ಪ್ರಚಾರಗಳಲ್ಲಿ ನೀಡಿರುವ ಮಾತಿಗೆ ತಕ್ಕಂತೆ ನಡೆದುಕೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ ಈ ಸಲ ರಾಹುಲ್ ಪ್ರಧಾನಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನವದೆಹಲಿಯ ತನ್ನ ನಿವಾಸದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ ಅವರು, ಮನಮೋಹನ್ ಸಿಂಗ್ ಅವರೇ ಪ್ರಧಾನಿ ಪಟ್ಟಕ್ಕೆ ಪಕ್ಷದ ಆಯ್ಕೆ ಎಂದು ಸ್ಪಷ್ಟಪಡಿಸಿದ್ದಾರೆ. ಮತದಾರ ನೀಡಿರುವ ಈ ತೀರ್ಪು ಭಾರತೀಯ ಮತದಾರನ ವೀವೇಕಯುಕ್ತ ತೀರ್ಪನ್ನು ಪ್ರತಿಫಲಿಸುತ್ತದೆ. ಅವರು ಯಾವಾಗಲೂ ಸೂಕ್ತವಾದುದನ್ನೇ ಆಯ್ಕೆ ಮಾಡುತ್ತಾರೆ ಎಂದು ಸೋನಿಯಾ ಗಾಂಧಿ ನುಡಿದರು.

ಮಂತ್ರಿಮಂಡಲಕ್ಕೆ ಸೇರುವಂತೆ ರಾಹುಲ್ ಗಾಂಧಿ ಅವರನ್ನು ತಾನು ಮನಒಲಿಸಲಿದ್ದೇನೆ ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಮನಮೋಹನ್ ಸಿಂಗ್ ಅವರು ನುಡಿದರು. ಅವರು ಸಂಪುಟದಲ್ಲಿರ ಬೇಕು ಎಂಬುದು ತನ್ನ ಇಚ್ಚೆ ಎಂದು ಸಿಂಗ್ ನುಡಿದರು.

ಇದಕ್ಕೂ ಮುಂಚಿತವಾಗಿ, ಎಐಸಿಸಿ ಮಾಧ್ಯಮ ಖಾತೆ ಮುಖ್ಯಸ್ಥ ಜನಾರ್ದನ ದ್ವಿವೇದಿ ಅವರೂ ಸಹ, ಮನಮೋಹನ್ ಸಿಂಗ್ ಅವರು ಪ್ರಧಾನಿ ಅಭ್ಯರ್ಥಿಯಾಗಿದ್ದು ಅವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

ರಾಹುಲ್ ಗಾಂಧಿ ಅವರು ಪಕ್ಷದ ಭವಿಷ್ಯದ ನಾಯಕ ಎಂದು ಹೇಳಿದ ಅವರು, ರಾಹುಲ್ ಪ್ರಧಾನಿಯಾಗಲು ಇಚ್ಚಿಸಿದಾಗ ಅವರು ಪ್ರಧಾನಿಯಾಗುತ್ತಾರೆ ಎಂದು ನುಡಿದರು.