ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಛತ್ತೀಸ್‌ಗಢ: 11ರಲ್ಲಿ 10ಸ್ಥಾನ ಗೆದ್ದ ಬಿಜೆಪಿ
ಮತಸಮರ
ನವೆಂಬರ್‌ನಲ್ಲಿ ನಡೆದ ವಿಧಾನ ಸಭಾ ಚುನಾವಣೆಗಳ ಬಳಿಕ ರಾಜ್ಯದಲ್ಲಿ 'ರಮಣ್ ಎಫೆಕ್ಟ್' ಜೋರಾಗಿದ್ದು, ಲೋಕಸಭಾ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ನೀಡಿಗದೆ. ಒಟ್ಟು 11 ಸ್ಥಾನಗಳಲ್ಲಿ ಬಿಜೆಪಿಯು 10 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಸಫಲವಾಗಿದೆ.

ನವೆಂಬರ್‌ನಲ್ಲಿ ಅಧಿಕಾರಕ್ಕೇರಿರುವ ಮುಖ್ಯಮಂತ್ರಿ ರಮಣ್ ಅವರು ಬಿಜೆಪಿ 'ಸ್ವೀಪ್' ಮಾಡಲು ಸಹಾಯ ಮಾಡಿದ್ದಾರೆ. ಹೊಸದಾಗಿ ಸೃಷ್ಟಿಯಾಗಿರುವ ಕೋಬ್ರಾ ಸ್ಥಾನ ಮಾತ್ರ ಕಾಂಗ್ರೆಸ್ ಪಾಲಾಗಿದೆ.

ಪರಿಶಿಷ್ಟ ವರ್ಗಕ್ಕೆ ಮೀಸಲಿರುವ ಎಲ್ಲಾ ನಾಲ್ಕು ಸ್ಥಾನಗಳಾದ ಬಸ್ತರ್, ಕಂಕೇರ್, ರಾಯ್‌ಗಢ ಮತ್ತು ಸುರ್ಗುಜಗಳನ್ನು ಗೆದ್ದಿದೆ. ಇದಲ್ಲದೆ, ಜಂಜ್ಗೀರ್ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಆ ಸ್ಥಾನವೂ ಬಿಜೆಪಿ ಪಾಲಾಗಿದೆ. ಇದಲ್ಲದೆ, ದರ್ಗ್, ರಂಜಂಡ್‌ಗಾಂವ್, ಮಹಸಮುಂದ್ ರಾಯ್‌ಪುರ ಮತ್ತು ವಿಲಾಸ್‌ಪುರಗಳಲ್ಲೂ ಬಿಜೆಪಿ ಜಯಭೇರಿ ಭಾರಿಸಿದೆ.